ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಗುರುವಾರ, ಜನವರಿ 30, 2020

ಸಿಕ್ಕೂ.. ಸಿಗದಿಹ ಉತ್ತರ..???

ನಾನ್ -ನೀನ್  ನನ್ನದೆನ್ನುತ 
ಅವರ್ -ಇವರ್  ಎನುತ 
ಇವರ್ -ಅವರ್  ಎನುತ 
ಅವರಿವರ್ ಗಳೊಂದಿಗೆ 
ಜಾತಿ  ಮಳೆಯ ಸಾರುತ 
ದ್ವೇಷ  ಅಸೂಯೆಗಳ ಬಿತ್ತುತ್ತಾ 
ಭೂ ವ್ಯಾಜ್ಯಗಳ  ಎಳೆಯುತ 
ಕಪಟ ರಾಜಕೀಯ ಮಾಡುತ 
ಮರೆತಿಹೆವು ಪ್ರೀತಿ ಸ್ನೇಹದ ಅಂಕಿತ 
ಅತಿನಿರತ ದುಡಿಮೆ -ಜಂಜಾಟಗಳಲ್ಲಿ  ಕಳೆಯುತ 
ಮನುಜ  ನೀ ಮರೆಯುತಿಹೇ  ನಿನ್ನಯ ತನವ 
ನಿನಗಿದೆಲ್ಲಾದುದರ ಅರಿವಿಲ್ಲದಿರುವುದೇ ಮಾನವ ? 
ಕೊನೆಗರಿಯುವೆ  ಅದರ  ಅರಿವಿನ ಮರ್ಮ 
ಆದರೆ ನೀ ಸಾಗಿ ಸವೆಸಿರುವೆ ಹಿಂದಿರುಗಲಾಗದ 
ಪರ್ವ.
ಜೀವನವೆಂಬುದು ಮಾಯೆ 
ನೀ ಬಲ್ಲೆಯಾ  ಅದರ  ಛಾಯೆ ?? 
ಅದೊಂದು ಸುಖ -ದುಃಖ ದುಮ್ಮಾನಗಳ ಮಿಲನ ಪಾತ್ರೆ 
ಒಂದೊಳ್ಳೆ ಅರ್ಥೈಸುವ ಮನಸ್ಸಿಲ್ಲ ಯಾರಲ್ಲಿ !
ನೆಮ್ಮದಿಯ ಸೂರು ಹುಡುಕಿದರೂ ಸಿಕ್ಕೊಲ್ಲ ಇಲ್ಲಿ 
ಅದೆಲ್ಲಿ ಸಿಗುವುದು ನನ್ನ-ನಿನ್ನಂತವರ ಬಾಳಲ್ಲಿ ? 
ಬಿಟ್ಟು ಬಿಡದಿರು, ಹಿಡಿದಿಡು, ಅದರ ಜಾಡನಿಲ್ಲಿ 
ಕೊನೆಗೊಂದಿನ ನಡವೆ ತೊರೆದು ಜಂಜಾಟದ ಜಾತ್ರೆ 
ಅದಕ್ಕಾಗಿ  ನೀ ಪಡುವೆ  ಯಾಕೀ ಅರಿವಿಲ್ಲದ ಯಾತ್ರೆ..? 

ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...