ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಸೋಮವಾರ, ನವೆಂಬರ್ 21, 2022

ಕಾಡಿನ ಕೂಸಾಗಿಸಿದೆ ನನ್ನ
ನಾನಲ್ಲ ಕಾಡಿನ ಕೂಸು
ನಿನ್ನೊಳಗಿನ ಶಾಂತತೆಯ
ಕೂಸು ನಾ
ನಿನ್ನೊಳಗೆ ಅರಳುತ್ತಿರುವ
ನನ್ನೊಳಗಿನ ಕೂಸು ನಾ
ಸುಮ್ಮನೆಯೂ ಕಾಡಿನ
ನೆಪವೊಡ್ಡ ಬೇಡ ನೀ
ಸಹಿಸುವಲ್ಲಿ ಆತ್ಮ
ಬೆಂಗಾಡಾಗಿರುತ್ತದೆ
ನಿನ್ನ ಕಾಲಧೂಳು ತಗಲುವಲ್ಲಿ
ಹೂವಾಗಿ ಬೆಳೆದು ನಿನ್ನ
ಪಾದವ ತಗಲುತ್ತ
ನನ್ನೊಳಗೆ ನಾ
ಬೆಳೆಯುತ್ತಿರುತ್ತೇನೆ 
ಶಾಂತಿಯ ಸಸಿಯಾಗಿ
ಕೊನೆಯೆಂಬ ಕೊನೆಯೂ
ಕೊನೆಗೊಳ್ಳುವವರೆಗೆ
ನನ್ನ.




ನನ್ನೊಳಗಿನ ಬುದ್ಧ
ಹಸಿರ ಉಸಿರಂತೆ
ಸದಾ ಹಸನ್ಮುಖಿ

ಪಕ್ಷಿಯಂತೆ ಪಟ ಪಟ
ಸೊರಗಿದಾಗಲೆಲ್ಲ
ಅಮ್ಮನಾಗುತ್ತಾನೆ

ಕರಗಿದಾಗಲೆಲ್ಲ
ಅವ ಜಾಗೃತನಾಗುತ್ತಾನೆ

ಶಾಂತತೆಗೂ ಶಾಂತ
ಈ ನನ್ನೊಳಗಿನ ಬುದ್ಧ

ಶಾಂತತೆಯ ಬಾಣ
ಮಾಡಿ ಕಾಡಿ ಪೀಡಿಸಿ
ನಗುವಿನ ಹೂವಾಗುತ್ತಾನೆ

ಕಾಡುವ ನಾಳೆಗಳಿಗೆ
ಭರವಸೆಯ ಬೆಳಕಾಗುತ್ತಾನೆ
ನಿನ್ನಾತ್ಮದಲ್ಲಿ ಬೆಳಗುವ
ಪ್ರೀತಿ ಜ್ಯೋತಿಯಂತೆ

ನನ್ನ -ನಿನ್ನೊಳಗಿನ ಬುದ್ಧನಿಗೆ
ಆ ಶುದ್ಧ ಬುದ್ಧನ ನೆರಳು
ಎಂದೂ ಕಾಡಿ ಮೋಹಿಸದಿರಲಿ

ಅವನಾತ್ಮದ ಬೆಳಗು
ಎಂದೆಂದಿಗೂ ನನ್ನ ನಿನ್ನಲ್ಲಿನ
ಕತ್ತಲು ಬೆಳಕು ಬೆರೆತ
ದಿವ್ಯ ಜ್ಯೋತಿಯಾಗಿ 
ಜಗದೊಳಗಿನ ಕತ್ತಲಿನ
ಕಾರ್ಮೋಡಗಳಿಗೆ 
ಸ್ಫೂರ್ತಿಯ ದಾರಿದೀಪವಾಗಿರಲಿ

ನೆನಪಿರಲಿ ಶುದ್ಧ ಬುದ್ಧನ
ನೆನಪಿನಲಿ


ಶನಿವಾರ, ನವೆಂಬರ್ 12, 2022

ಹೆಣ್ಣು

ಹೆಣ್ಣು 


ಹೆಣ್ಣಂತೆ ಅವಳು
ಆದರೆ ಕುಂಕುಮವಿರಬೇಕಂತೆ
ಹೆಣ್ಣಂತೆ ಅವಳು
ಜೇಡರ ಬಲೆಯ ಜಡೆ ಇರಬೇಕಂತೆ
ಹೆಣ್ಣಂತೆ ಅವಳು
ನರಿಗೆಗಳೆಲ್ಲ ಮಣ್ಣಾಗುವವರೆಗೂ
ಬಾಗುತ್ತಿರಬೇಕಂತೆ 
ಹೆಣ್ಣಂತೆ ಅವಳು 
ಜನ್ಮ ಸಾರ್ಥಕತೆಯ 
ಮಕ್ಕಳಿರಬೇಕಂತೆ 
ಹೆಣ್ಣಂತೆ ಅವಳು 
ನೌಕರಿ, ಸೌಕರ್ಯಗಳ 
ಉಸಾಬರಿ ಬೇಕಿಲ್ಲವಂತೆ 
ಹೆಣ್ಣಂತೆ ಅವಳು 
ಮನೆಯೊಳಗೆ ಆಕಾಶ ನೇಯ ಬೇಕಂತೆ 
ಹೆಣ್ಣಂತೆ ಅವಳು 
ಬಯಕೆ ಬಾಣಲೆ ಬೇಯಿಸಿ 
ಮನಸ್ಸು, ಕನಸುಗಳ 
ಅಡುಗೆ ಮಾಡಿ ಬಡಿಸಬೇಕಂತೆ 
ಹೆಣ್ಣಂತೆ ಅವಳು 
ಅಧೀನತೆ ಅವಳ ಆ ಜನ್ಮಸಿದ್ಧ   ಹಕ್ಕಂತೆ 
ಹೆಣ್ಣಂತೆ ಅವಳು 
ಸದಾ ನಗುತ್ತಿರಬೇಕಂತೆ 
ಕತ್ತಲ್ಲಲ್ಲಿರುವ ಹಣತೆಯಂತೆ  
ಹೆಣ್ಣು ಹೂವಂತೆ 
ನೋವಲ್ಲೂ ನಗಬೇಕಂತೆ 
ಹೆಣ್ಣು ಕೋಮಲೆಯಂತೆ 
ಸ್ವಾತಂತ್ರ್ಯ ಬಳಿ ಸುಳಿಯಬಾರದಂತೆ 
ಈ ಹೂವು, ಹಾವುಗಳ 
ಲೆಕ್ಕಾಚಾರವೆಲ್ಲ ಎಷ್ಟು ದಿನ? 
ಶರಣೆಂಬ ಅಸ್ತ್ರ
ಕತ್ತರಿಸಿ, ಧೈರ್ಯ ವೆಂಬ 
ಅಸ್ತ್ರಕ್ಕೆ ಕೈ ಚಾಚುವವರೆಗೆ.






     

ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...