ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಶುಕ್ರವಾರ, ಜೂನ್ 17, 2022

ನಿನ್ನನ್ನು ಕಣ್ತುಂಬಿಕೊಳ್ಳುವಾಸೆ
ದೀರ್ಘ ಉಸಿರು
ನನ್ನನ್ನು ಅರಸುವ ಮುನ್ನ
ಕಣ್ಣುಗಳು ಸದಾ ತೆರದಿರಲಿ
ಮುಚ್ಚುವ ಪ್ರಯತ್ನಬೇಡ
ಮರೆಯಾದೀತು ನಿನ್ನ ಬಿಂಬ
ಕಣ್ತುಂಬಿಕೊಳ್ಳುವಾಗ
ನಿನ್ನ ತನ ಬಿಟ್ಟು, ನನ್ನ ತನವ ಬಿಟ್ಟು
ಅಪ್ಪಿ ಬಿಡುವಾಸೆ
ನೀ ನಾನಾಗುವಾಗ ನಿನ್ನ ತನ ಮೆರೆದು
ನಾ ನೀನಾಗುವಾಗ ನನ್ನ ತನ ತೊರೆದು 
ಇಬ್ಬರೂ ಕೂಡಿ ಒಂದಾಗುವಾಗ
ಜೀವನ ಹಸಿರಿನ ಪಸೆಯಾಗಲಿ
ದೀರ್ಘ ಉಸಿರು ನನ್ನ
ಅರಸುವ ಮುನ್ನ....


ನೀ ರಭಸಕ್ಕೆ ಹೀಗೆ
ಬೀಸಿ,ನನ್ನ ಕನಸು
ಮನಸುಗಳ
ಗೊಂಚಲುಗಳನ್ನು
ಕದಿಯ ಬೇಡ.
ಒಂದೊಮ್ಮೆ ನೀ ಹಾಗೆ
ಬಳುಕಿ ಬಾಗಿದರೆ
ನಾ...
ನಾ......
ಹೇಗೆ ಭ್ರಮಿಸಿ ಬಾಳಲಿ
ನಿನ್ನ ಹಸಿರು ಉಸಿರಿನ
ನಾಳಗಳಲಿ.
ಹಸಿರು ಮೆತ್ತಿ, ಮೊಳಕೆಯೊಡೆಸಿದ ನೀನೇ 
ಮೊದಲಾಗಬೇಕು, ನನ್ನ ತನು ಮನವು 
ಉಸಿರು ಬಿಟ್ಟಾಗ
ಮುತ್ತಿಕ್ಕಿ, ನಿನ್ನ ಹಸಿರು ಬನದಲಿ
ಅಂಗಾತ ಮಲಗಿಸಿ ಬಿಡು 
ಸದಾ ಹಾತೊರೆದು ನಿರಾಸೆಯ
ನೀರನ್ನು ಸುರಿಸಿದ ನನ್ನ ಕಣ್ಣುಗಳಿಗೆ
ನಿನ್ನ ಮನಸ್ಸಿನಂತೆ ವಿಶಾಲ
ಬೊಗಸೆ ಕೈಗಳಿಂದ
ಹುಡಿ ಹುಡಿಯಾದ ಮಣ್ಣು
ಉದುರಿಸು, ಮುಂದೊಂದು
ಜನ್ಮದಲ್ಲಿ ನಿನ್ನ ಸಸಿಯಾಗುವೆ
ನನ್ನ ಕಣ್ಣುಗಳಿಂದ ಹರಿದು
ಪಸೆಯಾದ ನಿನ್ನಲ್ಲಿಯ
ಗುಡ್ಡವನ್ನು ಮುಚ್ಚಲು ನೀ
ಏನನ್ನು ಬಳಸುವೆ, ಯೋಚಿಸು...
ಆಗದು ಎಂದೂ ನಿನ್ನಿಂದ
ನೀ ಹುದುಗಿಸಿದಷ್ಟು ನಾ
ಚಿಗುರುವೆ, ಚಿಗುರುವೆ
ನಿನ್ನಯ ಮನದಲ್ಲಿ
ಸದಾ ಹಸಿರಾಗಿ ನಿನ್ನ ಉಸಿರಾಗಿ.




ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...