ನನ್ನ ಆತ್ಮ ದಂತ ಸೂರ್ಯ ಭೂಮಿಗೆ
ಒಂದು ವಸಂತ ತುಂಬಿದೆಯಂತೆ
ಹೆಮ್ಮೆತುಂಬಿದ ಅಭಿನಂದನೆಗಳು
ಚಿರಋಣಿಯ ಕೃತಜ್ಞತೆ
ಎಲ್ಲೋ ಹೊತ್ತೊಯ್ದ ರೂಪನ್ನು
ಮತ್ತದೇ ಪ್ರತಿಬಿಂಬಿಸಿದ್ದಕ್ಕೆ
ಕೋಪ-ತಾಪದ ಅನುರಾಗಗಳೆಷ್ಟೋ
ಬಿಟ್ಟು ಬಿಡುವನೆಂಬ ಮುನಿಸುಗಳೆಷ್ಟೋ
ಮನ-ಮನಗಳ ಭಾವವೇದನೆ
ಪದಗಳಲ್ಲಿ ಅವರ್ಣೀಯ
ನಿರ್ಲಕ್ಷ್ಯದಲ್ಲಿ ಮನೆಮಾಡಿದ ಸೂರಲ್ಲಿ
ಆಂತರ್ಯ ಅರಿವಿನ ಅನಿವಾರ್ಯ ಹಂಗಿಲ್ಲ
ಇಳೆಯ ಜೀವಜಗತ್ತು ಮರೆಮಾಚಿ
ನಗುವ ಸೌರಮಂಡಲ ಒಡೆಯ
ಒಲುಮೆ ಒಲೆಯ ಹೊತ್ತಿಸದೆ ಸುಡುವ ಸೂರ್ಯ
ತನ್ನ ದಿಕ್ಕಿನ ಪರಿಯ ತಿಳಿಯಗೊಡುವುದಿಲ್ಲ
ತಟಸ್ಥತೆಯ ಒರತೆ ಹಾಸಿಹೊದ್ದು ಮೌನದ
ಕಾಯಿಗಳು ಹಲ್ಲು ಕಳೆದುಕೊಂಡರು
ಭುವಿಯ ಒಡಲು ಬತ್ತುವುದೆ .. . . . . ?
ಅದನರಿತ ಛಲವೊಂದೆ ಲಜ್ಜೆತೊರೆದು
ತಳ್ಳಿದರು ನವವಂಸತ ಇದ್ದೆ ತೀರುವೆನೆಂದು .