ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಮಂಗಳವಾರ, ಏಪ್ರಿಲ್ 27, 2021

ಅಪ್ಪಿ

ಇರುವನೊಬ್ಬ ಅಪ್ಪಿ
ಬಹಳ ತುಂಟ ಅಪ್ಪಿ
ಆಡ ಹೋಗಿ, ಆಯ ತಪ್ಪಿ
ಬಿದ್ದ ರಭಸ, ಮರವ ತಬ್ಬಿ
ಏರಿ ಕುಳಿತು, ಅಳುತ ಅಪ್ಪಿ 
ಓಡಿ ಬಂದು, ಅಮ್ಮ ಬೈದು 
ಹಿಡಿದ ರಚ್ಚೆ, ಹೆಚ್ಚು ಆಗಿ 
ಅಮ್ಮ ಸೋತು, ಕೊಟ್ಟು ಪಪ್ಪಿ 
ಇಳಿದು ಶಾಂತವಾಗಿ  ಅಪ್ಪಿ 
ಕೊರಳ ಬಿಗಿದು ಕೊಟ್ಟನೊಂದು 
ಸಿಹಿಯ ಪಪ್ಪಿ ಹಿಡಿದು  ಜಪ್ಪಿ. 


ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...