ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಶುಕ್ರವಾರ, ಮೇ 21, 2021

ಮುಖ್ಯರಸ್ತೆಯಲ್ಲಿರುವ ಸಣ್ಣದೊಂದು ದಿನಸಿ ಅಂಗಡಿ.ಅಂಗಡಿಯ ಮಾಲೀಕ ವ್ಯಾಪಾರದಲ್ಲಿ ಬಹಳ ನಿಸ್ಸೀಮ(ಮೋಸ ಮಾಡುವುದರಲ್ಲೂ ಅಷ್ಟೇ). ನಾನು  ಬಸ್ಸಿಗಾಗಿ ಕಾದು ನಿಂತಾಗ, ಕೆಲಮೊಮ್ಮೆ ಅಲ್ಲೆಲ್ಲ ಸಂಚರಿಸುವಾಗ ಗಮನಿಸಿದ್ದೆ, ಆ ಮಾಲೀಕ ಹೇಗೆ ಹಳ್ಳಿಯ ಜನರು, ಮುಗ್ದ ಜನರನ್ನು, ಚಿಲ್ಲರೆ ಕೊಡುವ ವಿಷಯದಲ್ಲಿ ಎಷ್ಟೆಲ್ಲಾ ವಿಧದಲ್ಲಿ ಮೋಸ  ಮಾಡುತ್ತಿದ್ದನೆಂದು,  ಗಮನಿಸುವಿಕೆ ಅಷ್ಟೇ ಅಲ್ಲ, ಅನುಭವವನ್ನೂ ಪಡೆದಿದ್ದೆ. ಕೂಡು -ಕಳೆಯುವಿಕೆಯಲ್ಲಿ ವ್ಯತ್ಯಾಸ, ನೋಟುಗಳಲ್ಲಿ ವ್ಯತ್ಯಾಸ ಮಾಡುವುದು, ಚಿಲ್ಲರೆ ಕೊಡುವಿಕೆಯಲ್ಲಿ ಎಗರಿಸುವುದು, ತೂಕದಲ್ಲಿ ವ್ಯತ್ಯಾಸ, ಅವಧಿ ಮುಗಿದ ದಿನಸಿ ಪ್ಯಾಕ್ಗಳನ್ನು ನೀಡುವುದು, ಹೀಗೆ ನನ್ನ ಅರಿವಿಗೆ ಬಂದ ಅಂಶಗಳನ್ನು ಮಾಲೀಕನೊಂದಿಗೆ ಕೆಲವು ಬಾರಿ ಚರ್ಚಿಸಿ  ಸರಿ ಮಾಡಿಕೊಂಡಿದ್ದೆ. ಆದರೆ ಅಲ್ಲಿ ಖರೀದಿಸುವ ಉಳಿದ ಜನರನ್ನು ನೋಡಿದಾಗ,  ಛೆ.. !!ಪಾಪ ಅನ್ನಿಸುತ್ತಿತ್ತು, ಆದರೆ ನನ್ನಿಂದ ಏನೂ ಮಾಡಲಾಗದ ಪರಿಸ್ಥಿತಿ. 

 ಒಂದೊಮ್ಮೆ ಹೀಗೆ.... ಅಂಗಡಿ ಬಸ್ಸು ನಿಲ್ದಾಣದ ಪಕ್ಕದಲ್ಲೇ ಇದ್ದುದ್ದರಿಂದ, ಬಸ್ಸಿಗಾಗಿ ಕಾದು ನಿಂತಿದ್ದೆ. ನಾನೆಂದರೆ ಬಸ್ಸಿಗೆ ಸಾಮಾನ್ಯವಾಗಿ ಮುನಿಸು. ನಾ ಕಾದು ನಿಂತಾಗಲೆಲ್ಲ ಬಸ್ ರಾಯ ಏನಾದರೂ ತಗಾದೆ ಮಾಡಿಕೊಂಡು ಬಿಟ್ಟಿರುತ್ತಾನೆ. ಕಾಯುತ್ತಾ ನಿಂತ ನನಗೆ ಆ ಅಂಗಡಿಗೆ ಬಂದ ಯುವಕರ ಮೇಲೆ ದೃಷ್ಟಿ ಹರಿಯಿತು. ಇಬ್ಬರೂ young and smart ಆಗಿದ್ದರು. ಇಬ್ಬರನ್ನು ನೋಡಿದರೆ ಅಕ್ಕ -ಪಕ್ಕದ ಊರಿನವರ ಮುಖಚರ್ಯೆ ಕಾಣುತ್ತಿರಲಿಲ್ಲ. ಒಬ್ಬ energetic boy ಬೈಕ್ ನಲ್ಲೇ ಕುಳಿತ, ಒಬ್ಬ ಇಳಿದು ಅಂಗಡಿಗೆ ಹೋಗಿ ಸಿಗರೇಟು ಪ್ಯಾಕ್ ಕೇಳಿದ, ಹೆಚ್ಚು ನಂಟು ಬೆಳಸಿದರೆ ಶ್ವಾಸಕೋಶ, ಹೃದಯವನ್ನೆಲ್ಲಾ ತಿಂದು ಕ್ಯಾನ್ಸರ್ ಗೆ ಆಹ್ವಾನ ನೀಡುವ, ಒಂದು ಸಿಗರೇಟು ಪ್ಯಾಕ್ ಬೆಲೆ ಸುಮಾರು 200ರೂ ಇರಬಹುದು. ಅವನು ಕೇಳಿದ್ದು ಬರೋಬ್ಬರಿ 20 ಪ್ಯಾಕುಗಳನ್ನು, ಮಾಲೀಕ 20 ಪ್ಯಾಕ್ ಗಳನ್ನು ಕೈನಲ್ಲಿ ಹಿಡಿದು ಹಣವನ್ನು ಕೇಳಿದ, ಆ young boy ಪರ್ಸ್ ತೆಗೆದು ಪರದಾಡುತ್ತಿದ್ದದ್ದನ್ನು  ನೋಡಿದರೆ,  ಅಷ್ಟೆಲ್ಲಾ ಹಣವಿಲ್ಲವೆಂಬುದು ಅವನ ಹಾವಭಾವಗಳಲ್ಲಿ ವ್ಯಕ್ತವಾಗುತ್ತಿತ್ತು. ಹಿಂದೆ ತಿರುಗಿ ಬೈಕ್ ಮೇಲೆ ಕುಳಿತ ಸ್ನೇಹಿತನ ಬಳಿ ಹೋಗಿ ಹಣವನ್ನು ಕೇಳಿ ಪಡೆದುಕೊಂಡು ಬಂದು, ಇನ್ನಾ 6 ಪ್ಯಾಕುಗಳು ಬೇಕೆಂದ, ಅಂಗಡಿಯ ಮಾಲೀಕ 20 ಪ್ಯಾಕ್ ಗಳನ್ನು ಟೇಬಲ್ ನ ಮೇಲಿಟ್ಟು  6 ಪ್ಯಾಕ್ ಗಳನ್ನು ತರಲು ಒಳಗೆ ಹೋದ. ತಕ್ಷಣ ಆ intelligent young boy  20 ಪ್ಯಾಕ್ ಗಳನ್ನು ಎತ್ತಿಕೊಂಡು, ಚಾಲನೆಯಲ್ಲಿದ್ದ ಸ್ನೇಹಿತನ ಬೈಕ್ ನಲ್ಲಿ ಕುಳಿತ ಅಷ್ಟೇ... ಆ ಬೈಕ್ ಅರೆಕ್ಷಣದಲ್ಲಿ ಮಾಯ. ಮಾಲೀಕ ಗಲಿಬಿಲಿಯಿಂದ ತನ್ನ ಬೈಕನ್ನೇರಿ ಹಿಂಬಾಲಿಸಿದರೂ ಅವರ ಸುಳಿವು ಇಲ್ಲ. ಹಿಂದಿರುಗಿ ಬಂದ ಅಂಗಡಿಯ ಮಾಲೀಕನ ಸಪ್ಪೆ ಮೋರೆಯಲ್ಲಿ ನನಗೆ ಕಂಡಿದ್ದು ಮಾಡಿದ್ದುಣ್ಣೋ ಮಹರಾಯ ನಲಿದಾಡುತ್ತಿದ್ದದ್ದು. ಅಷ್ಟರಲ್ಲಿ ಬಸ್ ರಾಯ ಹಾರ್ನ್ ಮಾಡಿದ ಶಬ್ದಕ್ಕೆ ನಾನು ಗಲಿಬಿಲಿಗೊಂಡು ಬಸ್ಸನ್ನೇರಿ ಕುಳಿತ,  ನನ್ನ ತಲೆಯಲ್ಲಿ  ಒಂದು ಸಿಗರೇಟು ಪ್ಯಾಕ್ ಬೆಲೆ 200ರೂ, 20× 200 ಇವೇ ಕೊರೆಯ ತೊಡಗಿದವು.  


ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...