ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಮಂಗಳವಾರ, ಜುಲೈ 9, 2024

ಸಾಯುವ ಮುನ್ನ ಮತ್ತೆ,ಮತ್ತೆ ಹುಟ್ಟಬೇಕೆನ್ನಿಸುತ್ತದೆ
ಎಲ್ಲೆಲ್ಲಿಯೋ ಅಲ್ಲ, ಗಾಯಗಳ ನಡುವೆ.

ಬವಣೆ ಬಾಗಿ ಬಾಗಿ
ಬೀಗುತ್ತಿದೆ,
ಹೂವಳಗಿನ ನಗುವಂತೆ.
ಬರೆದು, ಬರೆಯಲಾರದ್ದುಗಳ 
ಅಂತರ ಮುಗಿಲು ದಾಟುತಿಹುದು 
ಬರೆ ಎಂದರೇ ನೀ
 ಏನ ಬರೆಯಲಿನ ನಾ.....
ಸುತ್ತಿ ಗಿರಕಿ ಹೊಡೆಸಿ
ಎಸೆಯುತ್ತಿರುವ 
ಬುವಿಯ ತೊದಲುಗಳ
ನೀನೇ ಹೆಕ್ಕಿಕೋ....
ಬರೆದು ಕೋ....
ಓದಿಕೋ.....
ಬಿತ್ತಿಕೋ....

ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...