ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಮಂಗಳವಾರ, ಜುಲೈ 16, 2024

ನಾನು ಮಗು
ನಿನ್ನ ಮಗು
ನಿನ್ನ ಕುಂಬೆ ರೆಂಬೆ
ಹಬ್ಬಿ ಮಗು
ನಿನ್ನ ನೆನೆದು 
ಅಳುವ ಮಗು
ನಿನ್ನ ಅಪ್ಪಿ
ನಗುವ ಮಗು
ನಿನ್ನ ನೋಡಿ
ಕುಣಿವ ಮಗು
ನಿನ್ನ ಹಸಿರ ಬನದಿ
ಬೆಳೆವ ಉಸಿರ ಮಗು.

ಬುಗುರಿಗೆಂದು
ಅಪ್ಪಿ ಕರೆದೆ
ಬರದ ಅಪ್ಪಿ ಕಂಡು
ಸಿಟ್ಟು ಬಂದು
ಎತ್ತಿ ಹೊಡೆದೆ
ಹೊಡೆದ ರಭಸ
ಬುಗುರಿ ತಿರುಗಿ 
ಪಾಲು ಪಾಲು 
ಕೈಯಿ ಕಾಲು.

ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...