ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಸೋಮವಾರ, ಸೆಪ್ಟೆಂಬರ್ 20, 2021

ಗ್ರಾಮೀಣ ಸಮುದಾಯ

  "ಗ್ರಾಮೀಣ ಸಮುದಾಯ " ಎಷ್ಟೊಂದು ವಿಶಾಲ ಅರ್ಥಕೊಡುವ ಪದ.  ಪದದಷ್ಟೇ ವಿಶಾಲ ಮನಸ್ಸಿನ,   ಚಿಂತನಾಶೀಲ, ಪ್ರಜ್ಞಾವಂತ  ಜನಗಳಿದ್ದರೆ  ಸಮಸ್ಯೆಗಳು ಸುಲಭವಾಗಿ ಪರಿಹಾರ ಕಾಣುತ್ತವೆ. 

ಎಲ್ಲಿ  ಜನರ ಆಲೋಚನೆಗಳು, ಚಿಂತನೆಗಳು, ಕಾರ್ಯ ಚಟುವಟಿಗಳು, ಆಚಾರ, ವಿಚಾರಗಳು  ಉನ್ನತ ಮಟ್ಟದಲ್ಲಿರುತ್ತವೆಯೋ , ಅಲ್ಲಿಯ ಶಾಲೆ, ಶಾಲೆಯ ವಾತಾವರಣವೂ ಸಹ ಉನ್ನತಮಟ್ಟದಲ್ಲಿರುತ್ತವೆ . ಒಂದು ಸಮುದಾಯ ಶಾಲೆಯ ಸಮಸ್ಯೆ /ಕೊರತೆಯನ್ನು ನೀಗಿಸುವಂತಿರಬೇಕೇ ಹೊರತು, ಹುಟ್ಟು ಹಾಕುವಂತಿರಬಾರದು.     

ಶಾಲೆಗಳ ವಿಷಯದಲ್ಲಿ ಸಮುದಾಯಗಳ ಪಾತ್ರ ಮಹತ್ವದ್ದು, ಅದರ ಅರಿವು ಅಲ್ಲಿಯ ಜನಸಮುದಾಯಕ್ಕಿರಬೇಕು. ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ದ್ವೇಷ, ಒಳರಾಜಕೀಯ, ಒಳಸಂಚು, ಜಾತೀಯತೆ, ಸ್ವ ಪ್ರತಿಷ್ಠೆ ಗಳಿಗೆ ಶಾಲೆ ಒಳಗಾಗುತ್ತಿರುವುದು ಖಂಡಿಸಲಸಾದ್ಯವಾದ  ಶೋಚನೀಯ ವಿಷಯ. ಎಲ್ಲಿ ಸಮುದಾಯದ ಜನ ಪ್ರಜ್ಞಾಹೀನರಾಗಿರುತ್ತಾರೋ,  ಅಲ್ಲಿ ಅರಾಜಕತೆ ಹಾಗು ಮೂರ್ಖತನದ ಕಾರ್ಯಗಳು ಮೈತುಂಬಿ ಕುಣಿದಾಡುತ್ತವೆ. 

ಸ್ವ ಪ್ರತಿಷ್ಠೆಗಳನ್ನು ಶಾಲೆಗಳಲ್ಲಿ ಬೇಯಿಸಿಕೊಳ್ಳಲು ಅವಕಾಶ ನೀಡುವ  ಅಥವಾ ತಮ್ಮ ಮೂರ್ಖತನದ ಅಮಲಿನ ನಶೆಯನ್ನು ಶಾಲೆಯಲ್ಲಿ ಪ್ರದರ್ಶಿಸಲು, ಕೈ ಬೀಸಿ ಕರೆಯುವ ಮಟ್ಟಿಗೆ ಶಿಕ್ಷಕ ವರ್ಗವೂ  ಬುದ್ಧಿಹೀನವಾಗಬಾರದು. 

ಶಾಲೆ ವಿದ್ಯಾದೇಗುಲ. ಅದನ್ನು ವಿದ್ಯಾದೇಗುಲವಾಗಿಯೇ ನೋಡುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು. 
 ಜನರು,  ಸಮುದಾಯ /ಶಾಲೆಯ ಹಿತಚಿಂತಕರಾಗಬೇಕೇ ವಿನಃ  ಘಾತುಕರಾಗಬಾರದು. 

ತಿಳಿದೋ, ತಿಳಿಯದೆಯೋ ಪ್ರೋತ್ಸಾಹಿಸುತ್ತಿರುವ ಪೋಷಕರು ಒಳಸಂಚುಗಳ ಬಗ್ಗೆ ಸ್ವಲ್ಪ ಚಿಂತಿಸಿದರೆ ಅದರಲ್ಲಿರುವ ಮರ್ಮಗಳು ಅರಿಯುತ್ತವೆ. 

ಎಲ್ಲಕ್ಕಿಂತ ಹೆಚ್ಚಾಗಿ ಪೋಷಕರಲ್ಲಿ ಒಡೆದು ಮೂಡಬೇಕಾದ ಜ್ಞಾನೋದಯ.... ಇವೆಲ್ಲದುದರ ದುಷ್ಪರಿಣಾಮ ಯಾರ ಮೇಲೆ..? 
       
                  

ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...