ಆರಂಭ ದಿನದ ಮುಂಜಾನೆಯಲ್ಲಿದ್ದ ಕುತೂಹಲ, ಖುಷಿಗಳು ಬರು ಬರುತ್ತಾ ಕ್ಷೀಣಿಸತೊಡಗಿದವು.
ಬಹಳವಾಗಿ ಕಾಡಿದ್ದು ಸಮಾನ ಮನಸ್ಕರ ಕೊರತೆ. ಕ್ಷಮಿಸಿ.....ಯಾರನ್ನು ದೂಷಿಸುವ ನಿಲುವು ನನ್ನದಲ್ಲ.
ನಿಮ್ಮೆಲ್ಲರಂತೆ ಬೇರೆಯವರು ಇರಲು ಸಾಧ್ಯವಿಲ್ಲ. ಕಾರಣ ವ್ಯಕ್ತಿಗತ ಭಿನ್ನತೆಗಳೆಂಬ ಸಹಜ ಗುಣ.
ಹೆಚ್ಚು ಏಕಾಂತವನ್ನು ಬಯಸುವವಳು ನಾ...
ಪ್ರವಾಸದಲ್ಲಿ ನನ್ನಿಚ್ಚೆಯ ನೋಟ, ನಡೆಯುವಿಕೆ, ಊಟ, ಇವುಗಳಲ್ಲಿ ಒಬ್ಬಳೇ ಹೊರಟ ದಾರಿಯಲ್ಲಿ ಜೊತೆಗೂಡಿದವರೊಂದಿಗೆ ಸೇರಿದೆ, ಮಾತಾಡಿದೆ, ಬೆರೆತೆ.
ದೃಷ್ಟಿಯಂತೆ ಸೃಷ್ಟಿ ಎಂಬುದು ಮನುಷ್ಯ ಗುಣ.
ವಿಶಾಲ ಮನೋಭಾವನೆ ಎಂಬ ದಯೆಯನ್ನು ದೃಷ್ಟಿಯಲ್ಲಿ ಬೆಳೆಸಿಕೊಂಡರೆ ಪ್ರತಿಯೊಬ್ಬರು ಭಿನ್ನತೆಯಲ್ಲೂ ಅನನ್ಯವೆಂಬುದು ನನ್ನ ಅನಿಸಿಕೆ.
ಇಂತಹ ಭಿನ್ನ ಸಂಗತಿಗಳ ನಡುವೆಯೂ ಪ್ರವಾಸದಲ್ಲಿ ನನ್ನದೇಯಾದ ಅಳತೆ ಗೋಲಿನಲ್ಲಿ ಬೆರೆತು ಖುಷಿಯ ಕ್ಷಣಗಳನ್ನು ಸವಿದಿದ್ದೇನೆ.
ಸುಂದರ ಕ್ಷಣದ ನೆನಪುಗಳಿಗೂ.... ನಿಮ್ಮೆಲ್ಲರಿಗೆ ಮನತುಂಬಿದ 🙏ಧನ್ಯವಾದಗಳು🙏