ಬಹಳ ತುಂಟ ಅಪ್ಪಿ
ಆಡ ಹೋಗಿ, ಆಯ ತಪ್ಪಿ
ಬಿದ್ದ ರಭಸ, ಮರವ ತಬ್ಬಿ
ಏರಿ ಕುಳಿತು, ಅಳುತ ಅಪ್ಪಿ
ಓಡಿ ಬಂದು, ಅಮ್ಮ ಬೈದು
ಹಿಡಿದ ರಚ್ಚೆ, ಹೆಚ್ಚು ಆಗಿ
ಅಮ್ಮ ಸೋತು, ಕೊಟ್ಟು ಪಪ್ಪಿ
ಇಳಿದು ಶಾಂತವಾಗಿ ಅಪ್ಪಿ
ಕೊರಳ ಬಿಗಿದು ಕೊಟ್ಟನೊಂದು
ಸಿಹಿಯ ಪಪ್ಪಿ ಹಿಡಿದು ಜಪ್ಪಿ.
ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ