ಕಾಸರಕೂಸು
ಬುಧವಾರ, ಫೆಬ್ರವರಿ 24, 2021
ರಣ ಬಿಸಿಲಿನ ಬೇಸಿಗೆಯಲ್ಲಿ ಮರಿಗುಬ್ಬಿ ತನ್ನ ತಾಯಿಯೊಂದಿಗೆ ಮರಳುಗಾಡಿನಲ್ಲಿ ನಡೆದು ಹೋಗುತಿತ್ತು. ಮರಿಗುಬ್ಬಿ ತಾಯಿ ಪ್ರೀತಿ ಅನುಮಾನಿಸಿ ಪರೀಕ್ಷಿಸಲೆಂದು ಹೇಳಿತು, ಅಮ್ಮ... ನಾನು ಹಿಂದಿರುಗಿ ಬರುವವರೆಗೂ ನೀನೊಬ್ಬಳೇ ನಿಂತ ಈ ಜಾಗದಲ್ಲೇ ನನಗಾಗಿ ಕಾಯುತ್ತಿರಬೇಕೆಂದು. ಹೆತ್ತವ್ವನಿಗೆ ಮಗುವಿನ ಮಾತಿನ ಮರ್ಮ ಅರ್ಥವಾಗದಿರುವುದೇ..? ತಾಯಿ ಗುಬ್ಬಿ ಒಪ್ಪಿಗೆ ನೀಡಿದ ಮೇಲೆ ಮರಿಗುಬ್ಬಿ ಅಲ್ಲಿಂದ ಹೊರಟು ಹೋಯಿತು. ಹಲವು ತಾಸು... ದಿನ, ರಾತ್ರಿ, ಹೀಗೆ ವಾರಗಳೇ ಕಳೆದವು. ಒಂದು ದಿನ ಮರಿಗುಬ್ಬಿಗೆ ತನ್ನ ತಾಯಿಯ ನೆನಪಾಗಿ ಮನೆಯನ್ನು ಸೇರಿತು. ಆದರೆ ಮನೆಯಲ್ಲಿ ತಾಯಿ ಇಲ್ಲದ್ದು ಕಂಡು ಆಶ್ಚರ್ಯ. ಅಕ್ಕ ಪಕ್ಕದಲ್ಲೆಲ್ಲಾ ವಿಚಾರಿಸಿ ಸೋತ ಮರಿಗುಬ್ಬಿಗೆ ನೆನಪಾಯಿತು, ತಾನು ತಾಯಿಗೆ ಹೇಳಿದ ಮಾತು. ತಕ್ಷಣ ಪುರ್ರೆಂದು ಮರಳುಗಾಡಿನ ಕಡೆ ಹಾರಿತು. ಮರಳುಗಾಡಿನಲ್ಲಿ ಆ ದಿನ ಹೇಳಿದ ಜಾಗದಲ್ಲೇ ಅಮ್ಮನ್ನನ್ನು ಕಂಡು ಮರಿಗುಬ್ಬಿಯ ಆನಂದ ಹೇಳತೀರದಾಯಿತು. ಅಮ್ಮನ ಹತ್ತಿರ ಹೋಗಿ ನೋಡಿತು, ತಾನು ಹೇಳಿದ ಜಾಗದಿಂದ ಸ್ವಲ್ಪವೂ ಅಲುಗದೆ ನಿಂತು, ಕೃಶವಾಗಿ ಮರಳಲ್ಲಿ ಹೂತು ಹೋಗಿ ಮುಖ ಮಾತ್ರ ಕಾಣುತಿತ್ತು.ಮರಿಗುಬ್ಬಿ ಅಮ್ಮಾ... ಎಂದೊಡನೆ ತನ್ನ ಮರಿಗಾಗಿ ಜೀವದ ತುದಿ ಎಳೆ ಹಿಡಿದು ಕಾಯುತ್ತಿದ್ದ ತಾಯಿಗುಬ್ಬಿ ಕೊನೆಯದಾಗಿ ಉಸುರಿತು, ಕಡು ಬಿಸಿಲು, ಮಳೆಗಳ ಕಾಯುವಿಕೆಯಲ್ಲಿ ನನ್ನಲ್ಲಿ ನೀನು ಗೆದ್ದೆ, ಆದರೆ ಮನಸ್ಸೊಳಗಿನ ಕಾಯುವಿಕೆಯಲ್ಲಿ ಕ್ಷಣ ಕ್ಷಣವೂ ಮರಳೊಳಗೆ ನೀ ಹೂತು ಹೋದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...
-
ನನ್ನನ್ನು ದೀರ್ಘವಾಗಿ ಓದಿಸಿದ ಪ್ರೀತಿಯ ಪುಸ್ತಕ ಕುವೆಂಪುರವರ "ಮಲೆಗಳಲ್ಲಿ ಮದುಮಗಳು " ಕಾದಂಬರಿ. 712 ಪುಟಗಳಿರುವ ಈ ಬೃಹತ್ ಕಾದಂಬರಿಯಲ್ಲಿ ಪಾತ್ರವ...
-
ಕ್ಷಮಿಸು ಎಂಬುದು ಆಗಾಗ್ಗೆ ಮರುಕಳಿಸುವ ಮಾರ್ದನಿ ನಮ್ಮ ಮನುಕುಲದೊಳಗೆ ಹಿಂಜರಿಕೆ, ಮುಗ್ಗರಿಕೆಗಳಿಲ್ಲ ಕ್ಷಮಿಸುವಿಕೆಯ ಅರಿವು ಪರಿವಿನ ಪಟ್ಟಿಯಲ್ಲಿ ಮುಲಾಜು ರಿಯಾಯಿತಿಗಳಿಲ...
-
ನೀ ಅಂದು ನಕ್ಕೆ.. ! ಗಾಣದಲ್ಲಿ ಸಿಕ್ಕಿದ ನಗು ಹೆಪ್ಪುಗಟ್ಟಿ ತಿರುಗಿತು ಗಾಣ ನಿಂತರೂ ಸವೆದ ದಾರಿಗಳು ಮಾಸಿಲ್ಲ ತಿರುಗುತ್ತಲೇ ಇವೆ ಒಳಗಿಳಿದ ಅದರ ಬೇರುಗಳು ನಾ ನಕ್ಕು ಚಿಗ...

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ