ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಬುಧವಾರ, ಅಕ್ಟೋಬರ್ 6, 2021

  ಬಾಪುವಿನೊಂದಿಗೆ,  ನನ್ನ ಕೆಲವು ಮನದಾಳದ  ಮಾತುಗಳಿವೆ. 
     ನೀವೇನೋ ಸ್ವಾತಂತ್ರ್ಯಕ್ಕೆ ಹೋರಾಡಿ, ಸ್ವಾತಂತ್ರ್ಯದ ಬೀಜ ಬಿತ್ತು ಹೋದಿರಿ,  ಆದರಿಂದು ಸ್ವಾತಂತ್ರ್ಯವೇ ಅರ್ಥ ಕಳೆದುಕೊಂಡು, ಕೆಲವು ವಿಷಯಗಳಿಗೆ ಹಾಗೂ  ಕೆಲವರಿಗೆ ಮಾತ್ರ ಸೀಮಿತವಾಗಿದೆ. 

ಅಹಿಂಸೆಯ ದಾರಿ ತೋರಿದಿರಿ, ಆದರೆ ನೀವು ಜನಗಳಿಗೆ ಮಾನಸಿಕವಾಗಿ ಹಿಂಸಿಸುವುದೂ ಮಹಾಪಾಪವೆಂದು ತೋರಿಸಿಕೊಡಲಿಲ್ಲ 

ಮಾನವೀಯ ಮೌಲ್ಯಗಳಿರಬೇಕೆಂದೇನೂ ಹೇಳಿದಿರಿ, ಆದರಿಂದು ಜನಗಳಲ್ಲಿ ಪ್ರೀತಿ, ಕರುಣೆ, ತ್ಯಾಗ, ಅನುಕಂಪ, ಸಹಾನುಭೂತಿ, ತಾಳ್ಮೆಗಳೆಲ್ಲವೂ ಬುಡಸಮೇತ ಕಿತ್ತು ಬಿದ್ದುಕೊಂಡಿವೆ. 
ಪ್ರಚಾರ, ಹೊಗಳಿಗೆ, ಅನ್ಯಾಯ, ಭ್ರಷ್ಟತೆ, ಮೋಸ, ವಂಚನೆಗಳಿಗೆ ಆಶ್ರಯ ನೀಡಿವೆ. 

ನೀವೇ ಯೋಚಿಸಿ..... ನಿಮ್ಮ ಕನಸಿನ ದೇಶದ ವ್ಯವಸ್ಥೆಯು,  ಸ್ವಲ್ಪ ಮಟ್ಟಿಗಾದರೂ ಸರಿಯಾಗಲು , ಜನ ಮನಗಳಲ್ಲಿ ನೀವು ಮತ್ತೆ ಮೊಳಕೆಯಾಗಿ  ಚಿಗುರೊಡೆಯಬೇಕಾದ ಅನಿವಾರ್ಯತೆ ಎಷ್ಟಿದೆ ಎನ್ನುವುದನ್ನು ಬಾಪು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...