ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಬುಧವಾರ, ಆಗಸ್ಟ್ 5, 2020

ಕೊಡಗಿನ ಪ್ರತಿಭಾನ್ವಿತ ಕವಿ ಕಾಜೂರು ಸತೀಶ್

                 ನನ್ನ ಈ ಲೇಖನ ಕೊಡಗಿನ ಪ್ರತಿಭಾನ್ವಿತ ಯುವ ಕವಿ ಹಾಗೂ ಭಿನ್ನತೆಯಲ್ಲಿ ವಿಭಿನ್ನತೆ ಮೆರೆವ,  ತನ್ನ ಆಸಕ್ತಿಯ ಕ್ಷೇತ್ರಗಳಲ್ಲಿ ಹವ್ಯಾಸಗಳ ಮೂಲಕ,  ಇಂದಿನ ಯುವ ಜನತೆಗೆ ಪ್ರೇರಣೆಯಾಗಿರುವ ಅನುವಾದಕ,  ಸಂವೇದನಾಶೀಲ ಯುವ  ಸಾಹಿತಿ,  ಶಿಕ್ಷಕ..  ಚಿಂತಕ  ಕಾಜೂರು ಸತೀಶ್ ರವರ ಕುರಿತಾಗಿದೆ.

  ಶ್ರೀ. ನಾರಾಯಣ್ ಮತ್ತು  ಶ್ರೀಮತಿ. ವಿಶಾಲಾಕ್ಷಿ ಯವರ ಪ್ರೀತಿಯ ಪುತ್ರ K. N. ಸತೀಶ್. ಇವರ ವಾಸ್ತವ್ಯ ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲೋಕಿನ ಕಾಜೂರು ಗ್ರಾಮ.
        
      2015ರ " ಕಡೆಂಗೋಡ್ಲು  ಶಂಕರಭಟ್ಟ  ಕಾವ್ಯ ಪುರಸ್ಕಾರ " ಪಡೆದ ಸತೀಶ್ ರವರ ಮೊದಲ  ಕವನ ಸಂಕಲನ "ಗಾಯದ ಹೂವುಗಳು "  ಮತ್ತು ಮಲಯಾಳಂ ಕವಿತೆಗಳ ಅನುವಾದಿದ ಪುಸ್ತಕ "ಕಡಲಕರೆ "ಗೆ..ತಡವಾಗಿಯಾದರೂ ಅಭಿನಂದನೆಗಳನ್ನು   💐💐ತಿಳಿಸುತ್ತಾ... ಮುಂದುವರೆಯುತ್ತೇನೆ.
      
                            ನಾ ಅರಿತಂತೆ ಸತೀಶ್ ರವರ  ಕವಿತೆಗಳಲ್ಲಿ ಅವರಂತೆ ಉತ್ಸಾಹವಿದೆ.ಸಾಮಾನ್ಯ ಓದುಗರನ್ನು ಯೋಚನಾ ಮಗ್ನರನ್ನಾಗಿಸುವ ಶಕ್ತಿ ಇದೆ. ಇಂದಿನ ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಆಕ್ರೋಶವಿದೆ. ಬೇಸರ, ಕಾಳಜಿ, ನೋವು, ಸಮಾನತೆಗಾಗಿ ಹಂಬಲ, ಭ್ರಷ್ಟಾಚಾರದ ವಿರುದ್ದ ದನಿ, ಪರಿಸರ ಕಾಳಜಿ, ಪ್ರೇರಣೆಯ ಶಕ್ತಿ,  ಇವುಗಳು ಅವರ ಕವಿತೆಯಲ್ಲಿ ಉಸಿರಾಡುತ್ತವೆ. ಸತೀಶ್ ರವರು  ಕವಿತೆಗಳನ್ನು ಹಡೆಯುವ ಪರಿ ನಮ್ಮಂಥ ಸಾಮಾನ್ಯ ಓದುಗರನ್ನು ಚಿಂತನಾಶೀಲರನ್ನಾಗಿಸುತ್ತದೆ.

     ಬುದ್ಧನ ತತ್ವಗಳಿಗೆ ಶರಣು ಹೋಗಿರುವ ಸತೀಶ್ ರವರು.. ಓದು ಮತ್ತು ಏಕಾಂತವನ್ನು ಸಂಗಾತಿಯನ್ನಾಗಿಸಿ ಕೊಂಡಿದ್ದಾರೆ. ಹೆಚ್ಚಾಗಿ ಏಕಾಂತವನ್ನು ಪ್ರೀತಿಸಿ.. ಅಪ್ಪಿರುವ ಇವರು ಏಕಾಂತ ಪರಿಭಾವಿ. ಶಿಕ್ಷಕರಾಗಿಯೂ ಹೆಚ್ಚಿನ ಜ್ಞಾನ ಹೊಂದಿರುವ ಇವರು ಎಲ್ಲರೊಂದಿಗೂ ಸ್ನೇಹಜೀವಿ. ಯಾವುದೇ ವೃತ್ತಿ /ಸೇವೆ ಕೊಟ್ಟರು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುವ ಮೃದು ವ್ಯಕ್ತಿತ್ವದ ಆಶಾಭಾವಿ.
  
ಸೂಕ್ಷ್ಮ ದೃಷ್ಟಿಕೋನದಲ್ಲಿ ಗಮನಿಸಿದಾಗ ಭಿನ್ನರಲ್ಲಿ ವಿಭಿನ್ನರಾಗಿ ಕಾಣುವ ಸತೀಶ್ ರವರು ಸಾಹಿತ್ಯವಲ್ಲದೇ ಇತರ ಹವ್ಯಾಸಗಳನ್ನು ಮೈಗೂಡಿಸಿಕೊಂಡಿದ್ದಾರೆ.

  ಸತೀಶ್ ರವರ ಫೋಟೋಗ್ರಫಿ :-ಪರಿಸರ ಪ್ರೇಮಿಯು
  ಹೌದಾಗಿರುವ ಇವರು,  ಸಾಮಾನ್ಯ ವಸ್ತು.. ಸಂಗತಿಗಳನ್ನು ತನ್ನ ದೃಷ್ಟಿಯಲ್ಲಿ ವಿಶೇಷವಾಗಿ ಕಾಣುತ್ತಾ.. ಪ್ರಕೃತಿ, ಸಸ್ಯ, ಪಕ್ಷಿ ಹೀಗೆ  ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ವಿಶೇಷವಾಗಿ ತೋರಿಸುವ ಕಲೆ ಕರಗತವಾಗಿಸಿಕೊಂಡಿದ್ದಾರೆ. ನಮ್ಮ ಸುತ್ತಮುತ್ತಲಿನ ವಸ್ತುಗಳು ಸತೀಶ್ ರವರ  ಕ್ಯಾಮರಾ ಕಣ್ ಚಳಕದಲ್ಲಿ ಕಂಡಾಗ  wow.. !ಎಂಬ ಉದ್ಗಾರ ಹೊರಡಿಸುವಂತಿರುತ್ತವೆ.   ಪಕ್ಷಿಗಳನ್ನು ಪ್ರೀತಿಸುವ ಇವರು ಅವುಗಳೊಂದಿಗೆ ನಂಟು ಹೊಂದಿದ್ದು.. ಪಕ್ಷಿಗಳ ಬಗ್ಗೆ ಅಪಾರ ಜ್ಞಾನ ತುಂಬಿಕೊಂಡಿದ್ದಾರೆ.

      ಮಾತುಗಳೇ ಮತ್ತೆ ಮತ್ತೆ ಆಲಿಸುವಷ್ಟು ಹಿತವೆನ್ನಿಸುವಾಗ ಹಾಡಿದರೆ ಎಷ್ಟು ಚಂದ...!! ಹೌದು ಸತೀಶ್ ರವರ ಹಾಡುಗಾರಿಕೆ ಕೇಳಲು ಇಂಪಾಗಿರುತ್ತದೆ. ಸತೀಶ್ ರವರು ಹಾಡಿರುವ  ಕನ್ನಡ, ಮಲಯಾಳಂ, ಹಿಂದಿ ಭಾಷೆಯ ಚಲನಚಿತ್ರಗೀತೆಗಳು, ಭಾವಗೀತೆಗಳು ಅವರ ಹಾಡುಗಾರಿಕೆಯಲ್ಲಿನ ಆಸಕ್ತಿ., ತೊಡಗಿಸಿಕೊಳ್ಳುವಿಕೆಯನ್ನು ಸಾಕ್ಷಿಕರಿಸುತ್ತವೆ.

            ಚಿತ್ರಕಲೆಯನ್ನು ಹವ್ಯಾಸವಾಗಿಸಿಕೊಂಡಿರುವ  ಸತೀಶ್
ರವರು ವರ್ಣಚಿತ್ರಗಳು... ಡಿಜಿಟಲ್ ಪೇಂಟಿಂಗ್..ಹೀಗೆ ವಿವಿಧ ರೀತಿಯ ಕಲಾತ್ಮಕ ಚಿತ್ರಗಳನ್ನು ಅರಳಿಸುವಲ್ಲಿ ನಿಸ್ಸೀಮರು.ಫೇಸ್ಬುಕ್, ಇನ್ಸ್ಟಾಗ್ರಾಮ್, ಸ್ಟಾರ್ ಮೇಕರ್, youtube ಗಳಲ್ಲಿ ಅವರು ತೊಡಗಿಸಿ ಕೊಂಡಿರುವ ರೀತಿ ಶ್ಲಾಘನೀಯ. 

 Kajoorusathish.blogspot.com ಈ ಬ್ಲಾಗ್ ಅನ್ನು ಒಮ್ಮೆ ವೀಕ್ಷಿಸಿದರೆ ಅವರ ಕವಿತೆಗಳು, ಬರಹ, ವಿಮರ್ಶೆ ಗಳು, ಹೀಗೆ ಸಾಹಿತ್ಯಾಭಿರುಚಿ ಅವಲೋಕನವಾಗುತ್ತದೆ. 

ಕಾಡಿನ ಹಾದಿಯಾದರೂ ಸೈ.. !ಎನ್ನುವ ಅನ್ವೇಷಣಾ ಮನೋಭಾವದ ನಮ್ಮ ಸತೀಶ್ ರವರಿಗೆ ಗೆಳೆಯರ ಜೊತೆಗೂಡಿ  ಚಾರಣ ಹೋಗುವುದು,   ಬಲುಪ್ರೀತಿಯ   ಹವ್ಯಾಸಗಳಲ್ಲಿ ಒಂದಾಗಿದೆ.  ಮಾಡೆಲಿಂಗ್ ಕ್ಷೇತ್ರಕ್ಕೂ ಸೈ ಎನ್ನುವ ರೀತಿಯ ಸುಂದರ, ಸದೃಢಕಾಯ ಸತೀಶ್ ರವರಿಗೆ... ಸತೀಶ್ ರವರು ಮಾತ್ರ ಸಾಟಿ.

     ಸಾಮಾಜಿಕಜಾಲತಾಣಗಳು... youtube.. ನಂತಹ ವಿಡಿಯೋ ಶೇರಿಂಗ್  ಸರ್ವಿಸ್ಗಳಲ್ಲಿ ಸರ್ಕಾರಿಶಾಲೆ ಮತ್ತು ಸರ್ಕಾರಿ ಶಾಲಾಮಕ್ಕಳ ಪ್ರತಿಭೆ.. ಕವಿತಾವಾಚನ ಹೀಗೆ ಹಲವಾರು ಉಪಯುಕ್ತ ಮಾಹಿತಿಗಳನ್ನು ಪಸರಿಸುವಲ್ಲಿ ಸಕ್ರಿಯರಾಗಿದ್ದಾರೆ.   " ಯಾರಲ್ಲೂ ಸಲ್ಲದ ಕಲೆಗಳು.. ಸತೀಶ್ ರವರಿಗೆ ಸಲ್ಲುತ್ತವೆ.".. ಕಾರಣ ಅವುಗಳ ಜಾಡು ಹಿಡಿದು ದಕ್ಕಿಸಿಕೊಳ್ಳುವ ಶ್ರಮದ ಪ್ರಯತ್ನ /ಛಲ ಮತ್ತು ಪ್ರತಿಯೊಂದರಲ್ಲೂ ಸೃಜನಶೀಲತೆ ಹುಡುಕುವ  ನಿಪುಣತೆ ಇವರಲ್ಲಿದೆ.

   ಗಣ್ಯ ವ್ಯಕ್ತಿಗಳಿಂದಲೂ ಸೈ ಎನ್ನಿಸಿಕೊಳ್ಳುವ ಇವರು,  ಸರಳಜೀವಿ. ಸನ್ಮಾನ, ಹೊಗಳಿಕೆ, ಪ್ರಚಾರ, ಆಡಂಬರದ ಜೀವನಗಳಿಂದ ದೂರದಲ್ಲೇ ಉಳಿಯುವ ಇವರು,  ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಒಬ್ಬಂಟಿಯಾಗಿ ಹೊರಡುವ ಪರಿ... ಕವಿತೆಗಳ ಮೊರೆ ಹೋಗುವ ರೀತಿ ಇವರ ವ್ಯಕ್ತಿತ್ವಕ್ಕೆ  ಇನ್ನಷ್ಟು ಮೆರಗು ನೀಡುತ್ತವೆ. 

 ಮಾನವೀಯ ಮೌಲ್ಯಗಳು ದಿನೇ ದಿನೇ ಕುಸಿಯುತ್ತಿರುವ ಇಂದಿನ 
ದಿನಗಳಲ್ಲಿ  ಇಂತಹ ಯುವ ಕವಿ., ಕವಿತೆಗಳು, ತೊಡಗಿಸಿಕೊಳ್ಳುವಿಕೆ, ವ್ಯಕ್ತಿತ್ವ ಹವ್ಯಾಸ ಯುವಪೀಳಿಗೆಗೆ ಮಾರ್ಗದರ್ಶಿ ಎಂದರೆ ಅತಿಶಯದ ಮಾತುಗಳಾಗುವುದಿಲ್ಲ. 

    ಇಂತಹ  ವಿಶಿಷ್ಟತೆಯ ವಿಭಿನ್ನ ಚೇತನ  ಶಿಕ್ಷಕರಾಗಿ, ಶಿಕ್ಷಣ ಇಲಾಖೆಯಲ್ಲಿರುವುದೇ ಹೆಮ್ಮೆಯ ಸಂಗತಿ.     2017 ರಲ್ಲಿ ಬೇಂದ್ರೆ ಗ್ರಂಥ ಬಹುಮಾನಕ್ಕೆ ಭಾಜನರಾಗಿರುವ, ಇವರಿಂದ ಸಾಹಿತ್ಯ ಲೋಕಕ್ಕೆ ಇನ್ನಷ್ಟು ಕೊಡುಗೆಗಳು ಸಲ್ಲುವಂತಾಗಲಿ,  ಹಾಗೆಯೇ ಮತ್ತಷ್ಟು ಪ್ರಶಸ್ತಿಗಳು ಇವರ ಪ್ರತಿಭೆಗೆ ಅರಸಿ ಬರಲಿ. 

 ತಮ್ಮಲ್ಲಿಯ   ಜ್ಞಾನ ಮತ್ತು ಕವಿತ್ವದ ನೆಲೆಯಿಂದ ರಾಷ್ಟ್ರಕಂಡಕವಿಗಳ ಸಾಲಿನಲ್ಲಿ ನಮ್ಮ ಸತೀಶ್  ಸರ್ ರವರ  ಹೆಸರು ಹೊರಹೊಮ್ಮುವಂತಾಗಲಿ ಎಂಬುದೇ ಸಾಮಾನ್ಯ ಓದುಗಳಾಗಿ ನನ್ನ ಮನತುಂಬಿದ ಹಾರೈಕೆ💐💐. 

ಸೋಮವಾರ, ಆಗಸ್ಟ್ 3, 2020

ನೆನಪು




ನಾ ಮುಂದಿನ ದಿನಗಳಲ್ಲಿ
ಖಾಲಿಯಾಗಿ ಹೋಗುತ್ತೇನೆ
ನೀ ಕೊಟ್ಟ ಬುತ್ತಿಯನ್ನು ಸಾಲೆಣಿಸಿ
ದಾರಿಯುದ್ದಕ್ಕೂ ಕನಸಿನ
ಇರುವೆಗಳಿಗೆ ಚೆಲ್ಲುತ್ತ ಸಾಗುತ್ತೇನೆ
ನಕ್ಷತ್ರದ ಸಮುದ್ರದಲ್ಲಿ ನಗುವಾಗ
ಸಿಡಿ ಮೂತಿಗೆ ಮುತ್ತಿಕ್ಕಿ ಸರಿಯುತ್ತೇನೆ
ನಿನ್ನ ಹಾವ -ಭಾವಗಳ ಬೆವರನ್ನು
ಕದ್ದು ಮುಕ್ಕಿ ಬಿಡುತ್ತೇನೆ
ಹಿಂಬಾಲಿಸಿ ನಿನ್ನ ದಾರಿ ತಪ್ಪಿಸಿ
ಕ್ಷಣ ಮಾತ್ರಕ್ಕೆ ಕಾಡಿಸಿ ಅಗ್ನಿಜ್ವಾಲೆಯ
ತಾಪಕ್ಕೆ ಬಿಸುಟು ಕೂತಾಗ
ನಿನ್ನ ಸವಿಗಲ್ಲಕೆ ಬಾಯಾರಿಸಿ ತುಟಿಯಿತ್ತು
ನೀ ಬಂದಾಗ ಮೆಲ್ಲ ಮೆಲ್ಲನೆ
ಮಾಯಾಕುದುರೆಯ ಪಲ್ಲಂಗವಾಗುತ್ತೇನೆ
ಸೂರಲ್ಲಿ ನಿಂತು ಮುಖವೆತ್ತಿ
ನಗುವಿನ ವದನ ಚೆಲ್ಲಿ ಕೈ ಬೀಸಿದಾಗ
ನಿರಾಕೃತಿಯ ನಕ್ಷತ್ರದಲ್ಲಿ ಆಲಿಂಗನದ
ಮಿಲನವಾಗಿ ಸದಾ ಮಿನುಗುತ್ತಿರುತ್ತೇನೆ.



ಮಕ್ಕಳಲ್ಲಿನ ಮಾನವೀಯತೆ


              ಮಕ್ಕಳಲ್ಲಿನ ಮಾನವೀಯತೆ

        ಪ್ರತಿಭಾನ್ವಿತರೆಲ್ಲ -ಮೌಲ್ಯವುಳ್ಳವರೇ..? ಜೀರ್ಣಿಸಿಕೊಳ್ಳಲು ಕಷ್ಟವಾಗುವ ಪ್ರಶ್ನೆ.   ಶಿಕ್ಷಕರಾಗಿ ಎಲ್ಲಾ ಮಕ್ಕಳನ್ನು ಸಮಾನರಾಗಿ ಕಾಣುವ ಪ್ರಯತ್ನ ಮಾಡುತ್ತೇವೆಯಾದರು, ಪ್ರತಿಭೆಯುಳ್ಳವರಲ್ಲಿ ಹೆಚ್ಚಾಗಿ ಮೋಹಗೊಳ್ಳುತ್ತೇವೆ. ಪ್ರತಿಯೊಂದು ಮಗು ಒಂದೊಂದು ಕೌಶಲ್ಯ ಹೊಂದಿರುತ್ತದೆ.ಒಂದೊಂದು ಮಗುವಿನ ಬುದ್ಧಿ ಶಕ್ತಿ ಮಟ್ಟ  ಒಂದೊಂದು ರೀತಿಯದ್ದಾಗಿರುತ್ತದೆ. ಇದರಲ್ಲಿ ಮಗುವಿನ ತಪ್ಪೇನು..?? ಅದನ್ನು ಗುರುತಿಸಿ ಒರೆ ಹಚ್ಚುತ್ತೇವೆಯಾದರು,
ಹೆಚ್ಚಾಗಿ ನಾವು ಇಷ್ಟಪಡುವುದು ಬುದ್ದಿವಂತರನ್ನ,ಪ್ರತಿಭೆಯುಳ್ಳ, ಚುರುಕುವುಳ್ಳ, ಮಕ್ಕಳನ್ನು ಮಾತ್ರ. ಮೇಲ್ನೋಟಕ್ಕೆ ಒಪ್ಪಿಕ್ಕೊಳ್ಳಲು ಕಷ್ಟವಾದರು ಒಳಮನಸ್ಸಿನ  ಸತ್ಯದ ಪೊರೆ ಬಿಚ್ಚಿದರೆ ಸಿಗುವ ಉತ್ತರ.

       ಅದೇ ತರಗತಿಯಲ್ಲಿ ಒಳ್ಳೆ ನಡತೆ,  ಮೌಲ್ಯವುಳ್ಳ  ಮಗು ಇದ್ದರು, ಅದರ ಬಗ್ಗೆ ನಾವು ಅಷ್ಟಾಗಿ ಗಮನ ಕೊಡುವುದಿಲ್ಲ.   ಏಕೆ...??  ಶ್ರದ್ಧೆ,  ನಿಷ್ಠೆ, ನ್ಯಾಯ, ಪ್ರಾಮಾಣಿಕತೆ, ಸಹನೆ, ಅನುಕಂಪ, ಸತ್ಯ, ಒಳ್ಳೆಯ ಗುಣ, ಸಂಸ್ಕಾರ, ಸಚ್ಚಾರಿತ್ಯ, ಸಹಕಾರ, ಸಹೋದರತ್ವ ಗುಣಗಳು ನಮಗೆ ಒಂದು ಅತ್ಯಮೂಲ್ಯ ಕೌಶಲ /ಪ್ರತಿಭೆಯಾಗಿ ಗೋಚರಿಸುವುದಿಲ್ಲ?? ಗೋಚರಿಸಿಲ್ಲ. ಸೂಕ್ಷ್ಮವಾಗಿ ಆಲೋಚಿಸಿ, ಅವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ.

      ಇಂದಿನ ನವನವೀನತೆ ಹೊಂದಿರುವ ಸಮಾಜದಲ್ಲಿ ಮಾನವ ವೈಜ್ಞಾನಿಕತೆಯ ತುತ್ತ ತುದಿಯನ್ನೇರಿದರು, ಮಾನವರಾಗಿ ಬಾಳುವುದನ್ನು ಕಲಿತ್ತಿಲ್ಲ. ನೈತಿಕತೆ, ಮಾನವೀಯತೆಗಳು ರಾಗಿ ಕಾಳಿನಷ್ಟು ಬೆಲೆ ಉಳಿಸಿ ಕೊಂಡಿಲ್ಲ.

                 ನಾನಾದರು ಮಾಡುವುದೇನು?  ನನ್ನಲ್ಲೇ ನಾ ಹೊಕ್ಕಾಗ ಅಥವಾ ಇತರರನ್ನು ಅವಲೋಕಿಸಿದಾಗ, ಒಂದು ಮಗು /ವ್ಯಕ್ತಿ ಬುದ್ಧಿವಂತ, ಪ್ರತಿಭಾವಂತ ಎಂದರೆ ಪ್ರೋತ್ಸಾಹಿಸಿ ಬೆನ್ನುತಟ್ಟುತ್ತೇವೆ, ಇನ್ನಾ ಮುಂದುವರೆದು,ಸಾಮಾಜಿಕಜಾಲತಾಣಗಳಲ್ಲಿ, ಅವರ ಬಗ್ಗೆ ಹಾಕಿ ಬೀಗುತ್ತೇವೆ.ಅದೇ ಒಂದು ಮಗು/ ವ್ಯಕ್ತಿ  ಸಂಸ್ಕಾರವಂತನಾಗಿ, ಮೌಲ್ಯವುಳ್ಳವನಾಗಿ,  ಬಾಳುತ್ತಿರುವನೆಂದರೆ, ನಾವು ಅವರನ್ನು  ಗುರುತಿಸುವ  ಗೋಜಿಗೆ  ಹೋಗುವುದಿಲ್ಲ . ನೈತಿಕಗುಣವಿಲ್ಲದ ತಳಪಾಯ ಕಟ್ಟ ಹೊರಟಿರುವ ನಮಗೆ ಕಾಣುವುದು ಪ್ರತಿಭೆ, ಪುರಸ್ಕಾರ, ಪ್ರಶಂಸೆಗಳ ಗರಿಮೆಯ ಹಿರಿಮೆ.

               "ವರ್ತನೆಯ ನರ್ತನಕ್ಕೆ ಪರಿವರ್ತನೆಯ ಶೃಂಗಾರ "ಎಂಬ ಕವಿವಾಣಿಯಂತೆ ಪ್ರತಿಭಾವಂತರನ್ನು ಗೌರವಿಸೋಣ, ಪ್ರೋತ್ಸಾಹಿಸಿ, ಬೆಳೆಸೋಣ ಜೊತೆಗೆ ಮಾನವೀಯತೆಯನ್ನು ಎತ್ತಿ ಹಿಡಿಯೋಣ.

             ಜೀವನದಲ್ಲಿ ಪ್ರತಿಭೆ, ಸಾಧನೆಗಳಷ್ಟೇ ಮುಖ್ಯವಲ್ಲ, ಅದರೊಂದಿಗೆ ಗುಣ, ನಡತೆ, ಸಂಸ್ಕಾರ, ಬೆರೆತುಬಾಳುವ ಮನಸ್ಸು, ಗುರುಹಿರಿಯರಲ್ಲಿ ವಿನಯತೆಗಳು ಅವಶ್ಯಕ. ಇಂತಹ ಮಕ್ಕಳನ್ನು ಗುರುತಿಸಿ ನೈತಿಕ ಬಲವರ್ಧನೆಗೊಳಿಸುವ ಕೆಲಸ ನಮ್ಮಿಂದಾಗಬೇಕು. ಇಂತಹ ಅಭೂತಪೂರ್ಣವಾದ  ಹೊಣೆ , ಶಾಲೆ, ಶಿಕ್ಷಕರು, ಪೋಷಕರುಗಳಾದ ನಮ್ಮ ಮೇಲಿದೆ.




ಲೇಖನಕ್ಕೆ ಸ್ನೇಹಿತೆ ಲಕ್ಷ್ಮಿಯ ಪೂರಕವಾದ ಆಶಯ                                     ನುಡಿಗಳು :-

 ಪ್ರತಿಭಾವಂತರನ್ನು ಪ್ರೋತ್ಸಾಹಿಸುವುದು ಸಮಂಜಸವೇ ಸರಿ. ಜೊತೆಗೆ ಸಾಮಾನ್ಯ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು, ಅಷ್ಟೇ ಮುಖ್ಯ. ಕೆಲವೇ ಪ್ರತಿಭಾವಂತರಿಂದ ಸಮಾಜ ಸಮೃದ್ಧಿ ಆಗುವುದಿಲ್ಲ. ಪ್ರತಿಯೊಬ್ಬರು ತಮ್ಮ ಕೊಡುಗೆ ನೀಡಬೇಕು. 

     ಪ್ರತಿಯೊಂದು ಮಗುವೂ ಅನನ್ಯ. ವಿಭಿನ್ನತೆಯೇ ಪ್ರತಿಯೊಬ್ಬರ ವೈಶಿಷ್ಠ್ಯ. ಈ ಭಿನ್ನತೆಯನ್ನು ಸ್ವೀಕರಿಸುವ ಗುಣ ಎಲ್ಲರಲ್ಲು ಇರಬೇಕು. ಎಲ್ಲರು ಅವರದೇ ಆದ ವ್ಯಕ್ತಿತ್ವ ಹೊಂದಿರುತ್ತಾರೆ. ಹೆಚ್ಚಿನ ನಿರೀಕ್ಷೆ ಸಲ್ಲದು. ಪ್ರತಿಭಾವಂತ ಮತ್ತು ಸಾಧಾರಣ ವಿದ್ಯಾರ್ಥಿಯನ್ನು ಭೇದಭಾವ ದೃಷ್ಟಿಯಲ್ಲಿ ಕಾಣಬಾರದು. ಪ್ರತಿ ಮಗುವನ್ನು ಶಿಕ್ಷಕರು ಸಮಾನ ಮನೋಭಾವದಿಂದ ನೋಡಬೇಕು. ಪ್ರತಿಭಾವಂತ ಮಗು ಮಾತ್ರ ನಮ್ಮ ಪ್ರತಿಷ್ಠೆ ಅಲ್ಲ. ಪ್ರತಿ ಮಗುವೂ ಸಹ ನಮ್ಮ ಪ್ರತಿಷ್ಠೆ. 

  ಸಾಮಾನ್ಯ ಮಗುವಿನ ವಿಶೇಷತೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ತರಗತಿಯಲ್ಲಿ ಈ ತರಹದ ವಿದ್ಯಾರ್ಥಿಗಳು ಇರುತ್ತಾರೆ.ಹೇಗೆಂದರೆ, ಕಲಿಕೆಯಲ್ಲಿ ಹಿಂದುಳಿದಿದ್ದಾನೆ, ಆದರೆ ನಯ -ವಿನಯದಲ್ಲಿ ಎಲ್ಲರಿಗಿಂತ ಮುಂದೆ. ಶಿಕ್ಷಕರೆದುರು ಮಾತನಾಡಲು ಹಿಂಜರಿಯುತ್ತಾಳೆ, ಆದರೆ ತನ್ನ ದೃಷ್ಟಿ ದೋಷ ಸಹಪಾಠಿಗೆ ಸಹಾಯ -ಬೆಂಬಲ ನೀಡಲು ಹಿಂಜರಿಯುವುದಿಲ್ಲ. ಸದಾ ಕೀಟಲೆ ಮಾಡುವ ಇವನು, ಶಾಲೆಯ ಕೆಲಸ ಕಾರ್ಯಗಳಲ್ಲಿ ಸದಾ ಮುಂದು. ಗೃಹಕಾರ್ಯ ಮಾಡದ ಇವನು, ಎಷ್ಟೇ ಬೈದರೂ ಬೇಸರಗೊಳ್ಳುವುದಿಲ್ಲ.  ಅವನ ಮುಗ್ದ ನಗು ಮಾಸುವುದಿಲ್ಲ. 

  ಪಾಠ ಪ್ರವಚನ ವಿಷಯದಲ್ಲಿ ಇವನು ಹಿಂದೆ ಇದ್ದಾನೆ, ಆದರೆ ಈ ವರೆಗೆ ಅನ್ಯ ಯಾವ ವಿಷಯದಲ್ಲೂ ತಪ್ಪು ಮಾಡುವುದಿಲ್ಲ. ಇಂತಹ ಹಲವು ವಿದ್ಯಾರ್ಥಿಗಳು ಕಾಣ ಸಿಗುತ್ತಾರೆ. ಅವರನ್ನು ಬೇರೆಯವರೊಂದಿಗೆ ಹೋಲಿಸಿ ಹೀಯಾಳಿಸುವ ಬದಲು, ಗುಣಗಳನ್ನು ಗುರುತಿಸಿ, ಪ್ರೇರೇಪಿಸಿದರೆ ಮುಂದೆ ಖಂಡಿತಾ ಸುಧಾರಿಸುತ್ತಾರೆ. 

  ಸಮಾಜ ಕೇವಲ ಪ್ರತಿಭೆ ಮೇಲೆ ನಿಂತಿಲ್ಲ. ಮಾನವೀಯ ಮೌಲ್ಯಗಳ ನೆಲೆಯಲ್ಲಿ ನಿಂತಿದೆ. ಇದನ್ನು ಬೆಂಬಲಿಸುವ ಹೊರೆ ಶಿಕ್ಷಕರದ್ದು ಮತ್ತು ಪೋಷಕರದ್ದು. 



ಶುಕ್ರವಾರ, ಜುಲೈ 31, 2020


            ಮಿನಿ ಕತೆ 

ದಿನ ಬೆಳಗುವ ಸೂರ್ಯ. ಅವನ ಬೆಳಕಲ್ಲೇ ಮಿನುಗುವ ಹುಳು. 

ಕಾಣದೇ ಸೂರ್ಯನ ಸಮಯ ಮುಂದೆ ಚಲಿಸುತ್ತಿರಲ್ಲಿಲ್ಲ.

ಸೂರ್ಯನಿಗೆ ಹುಳುವಿನಲ್ಲಿ ಅವಿಶ್ವಾಸದ ಕದಿರ ಬಿಂದುಗಳು. ಪರೀಕ್ಷಿಸ ಬಯಸಿ, 

ನಸುಕಾದರೂ  ಬೆಳಗಲಿಲ್ಲ ಜಗದೊಡೆಯ.   ಬಂದೇ ಬರುವನೆಂದು ಮಿಣುಕಲು 

ಹುಳು ಕಾಯುತ್ತ ಕಾಯುತ್ತ...  ಕೂತಲ್ಲೇ ಕುಸಿದು ಬಿದ್ದಿತು. ಜನ ಗುಂಪುಗಟ್ಟಿ

ಕೋಲಿನಿಂದ ತಿವಿದು ನೋಡಿದರು. ಸಂಶಯವಿಲ್ಲದೆ ಹುಳು ಸತ್ತಿತ್ತು. 

ಸೂರ್ಯ ನಗುತ್ತಿದ್ದ .  ಆದರೆ ಹುಳು ಸೂರ್ಯನೊಳಗೆ ಬದುಕಿತ್ತು.                                                                                              


                                                                            
        

ಗುರುವಾರ, ಜುಲೈ 30, 2020

ತಲೆಶೂಲೆ


               ತಲೆಶೂಲೆ

ಕಣ್ಣು ರೆಪ್ಪೆ ಮತ್ತು ಹುಬ್ಬಿನ ಮೇಲಿನ ಗುಂಗು
ಸದಾ ತನ್ನಲ್ಲೇ ಸುತ್ತುತ್ತಿರುತ್ತದೆ
ನರನಾಡಿಗಳೊಂದಿಗೆ ಸರಸದ ವಿರಸ
ಎಡವಾದರೆ ಎಡ, ಬಲವಾದರೆ ಬಲ
ಗುಂಗಿನ ಅಮಲಿಗೆ ಕರೆಯೋಲೆಯ
ಅಗತ್ಯ ಅನಿವಾರ್ಯಗಳಿಲ್ಲ
ಆತಿಥ್ಯ ಬಯಸದ ಹೊರದೂಡ ಇಚ್ಛಿಸುವ
ಅಮಲಿನ ತೀವ್ರತೆಗೆ ಮಸ್ತಿಷ್ಕದಲ್ಲಿ
ಮಿತಿಗುಡುವ ಮೃದು ಮನಸ್ಸಿನ ಹುಳುಗಳು
ಕೆಲಸಕಾರ್ಯಗಳು ರಜೆಯ ಬೆನ್ನು ಬಡಿದುಬಿಡುತ್ತವೆ
ವಿಶ್ರಾಂತಿ ಅರಸಿ ಬಗ್ಗಿ ಬಗ್ಗಿ ನೋಡಿದರು
ಅಡ್ಡಗಟ್ಟಿ  ಜೀಗುಡುವ ಜೇನುನೊಣಗಳ ಸದ್ದು
ಗುಳಿಗೆಯ ಮೋಹಕ್ಕೆ ಜೋತುಬಿದ್ದರು
ಸ್ವಲ್ಪ ಮಟ್ಟಿನ ಮೋಹದ ಪೊರೆ ಕಳಚಿಬಿಡುತ್ತದೆ
ಕೃಶ ದೇಹದ ಬಾವು ಬಯಸಿ ಸುತ್ತಾಡಿದರು
ಹಿಂಡಿ ಹಿಪ್ಪೆಯಾಗಿಸಿ ರಸ ಕುಡಿದು
ತೇಗುವವರೆಗು ಗುಂಗಿನ ನೆರಳು ಬೆಳಕಿನ
ಗೋಡೆಯ ಆಟ ನಡೆಯುತ್ತಿರುತ್ತದೆ. 

ಸೋಮವಾರ, ಜುಲೈ 27, 2020

ಹರಿಕಾರ


ಹೇ ದೇವಾ... ಭವ -ಬವಣೆಯ ಹರಿಕಾರ
ಏಕಾಗಿ ಬಿಟ್ಟಿರುವೆ ತನುವ !
ನನ್ನದೆನ್ನುವುದು ಮರೀಚಿಕೆಗೆ ಬಾಯಾರಿರುವಾಗ
ಕೊಟ್ಟು -ಕೇಳುವ ಪರಿಯ ದಿರಿಸೇನು

ಶೈಶವ -ಹರೆಯಗಳ ಅರಿವಿಲ್ಲದ ಕನವರಿಕೆ
ಅರಿತು ಬೆರೆಯುವಾಗ ನೀ ಎಡೆಗೊಡುತ್ತಿಲ್ಲ
ತಪ್ಪು ಒಪ್ಪಿನ ಜರಿಯ ಕಪ್ಪು ಹಾಸಿನ ದಿರಿಸು ತೊಟ್ಟಿರುವ
ಅಳೆದು ತೂಗುವ ಲೆಕ್ಕಾಚಾರದ ತಾರೀಫು

ಒಬ್ಬರಲ್ಲಿ ಕಿತ್ತು ಇನ್ನೊಬ್ಬರಿಗೆ ಬಿತ್ತುವ
ಸಮ ಅಸಮಾನತೆಗಳ ಆತ್ಮವ ನಾ ಒಲ್ಲೆ
ಎಲ್ಲಿಯ ಗುಣ ವ್ಯತ್ಯಾಸಗಳ ದೋಷಕ್ಕೆ
ಅಸಹಾಯಕರ ಕಾಡಿ ದೂಡಿರುವೆ
ಮನಸ್ಸಲ್ಲಿ ಪರಿಪಕ್ವತೆಯ ನಂಟಿನ ಜಾಡಿದ್ದರೆ
ಜಗದಲಿ ಕಾಣುತ ಸಮಾನರಾಗಿ
ಹಂಚೆಲ್ಲ ಸುಖ -ದುಃಖದ ಆಗಮ -ನಿಗಮಗಳ ಫಲವ


ಕೃಶದ ಇಂದು ನಾಳೆಯ ದೇಹದ ಅಸ್ತಿತ್ವಕ್ಕೆ
ಪುಟಿಯುತ್ತಿದೆ ನಾನು -ನನ್ನದೆಂಬ ಅಮಲಿನ ಮಜಲುಗಳು
ಸಿರಿತನವ ಉಟ್ಟು ನೆಮ್ಮದಿಯ ಕಿತ್ತು
ಗಹಗಹಿಸಿ ನಗುತ್ತಿರುವ ನಿನ್ನ ಮರ್ಮಕ್ಕೆ
ಶರಣಯ್ಯ ನಾ ಶರಣು


ನನ್ನೊಳಗಿನ ನಾನು ಬೇರಲ್ಲೇ ಕೊಳೆಯಲಿ
ಕ್ರೂರತೆಯಲ್ಲಿನ ಮೃಗ ತುಳಿಯಲಿ
ಸಮಾನತೆಯ ದಿಕ್ಕು ರಾರಾಜಿಸಲಿ
ನ್ಯಾಯ ಸಂಕುಲ ಅಜರಾಮರವಾಗಲಿ
ಪ್ರೀತಿಯು ಪ್ರೀತಿಯ ಸೇರುತ ಬಾಳಲಿ
ಆಗ ನಾ ಮೆಚ್ಚಿ ನುಡಿಯುವೆ
ನಿನ್ನ ಆಂತರ್ಯ -ಬಾಹ್ಯ ತತ್ವ ಸತ್ವದ ಸಿದ್ದಿ ಶುದ್ಧಿಯ.

ಶುಕ್ರವಾರ, ಜುಲೈ 24, 2020

ಅರೆನಗ್ನ ಕನಸು


       ಅರೆನಗ್ನ ಕನಸು

ನಿನ್ನ ಅರೆ ಬೆಳಕಿನ ಇಬ್ಬನಿಯ ಮನೆಯಲ್ಲಿ
ನಾ ಒದ್ದೆಯಾಗಿ ಒಣಗುತ್ತಿರುವಾಗ
ಕೋಲ್ಮಿಂಚಂತೆ  ನೀ ಹೊಕ್ಕೆ
ಚಳಿಯನ್ನು ತಬ್ಬಲಿಯಾಗಿ  ಹೊದ್ದಿದ್ದ   ನನಗೆ
ಕಣ್ಣುಗಳಿಂದ  ಬಿಟ್ಟ ಇರುವೆ ಮೈಯೆಲ್ಲಾ ಸುತ್ತುತ್ತಿದೆ
ನಿನ್ನ ಎದುರಿನ ಅಂತರದಲ್ಲಿ ನಾ ಮುದುಡಿದರೆ
ತುಟಿಯಂಚಿನ ಮೊಗ್ಗಿನ ತಾವರೆಯು ಮುಡಿಯಲ್ಲಿ
ಬಿಸಿ ಉಸಿರಿನ ತಾಪಕ್ಕೆ ಹಬ್ಬಿ ಚುಂಬನದ
ಅಂಬರಕ್ಕೆ  ಅರಳಿದ ಕೊಡೆಯಾಯಿತು
ನಿನ್ನ ಕೆಮ್ಮಣ್ಣು ತುಟಿಯಲ್ಲಿ ನನ್ನ ರೂಪು
ಬಿತ್ತಿದಾಗ ನನ್ನೊಳಗೆ ನವಿಲುಗಳು ಗುಂಪುಗಟ್ಟಿ
ನೃತ್ಯವಾಡಿದ್ದವು
ಹಿಡಿದೆಳೆದ ಒರಟು ರಭಸದ ಬಿಗಿತಕ್ಕೆ
ಕೆನ್ನೆಯ ಗುಳಿಯ ಕಚಗುಳಿಯಲ್ಲಿ ನಗುವ
ಕಂದಮ್ಮನಾಗಿದ್ದೆ
ಅಡ್ಡಾ ದಿಡ್ಡಿನ ಹಾಸು ಹೊಕ್ಕಳ್ಳಲ್ಲಿ ಮಲಗಿದ ನನಗೆ
ಮತ್ತದೇ ಇರುವೆ ಮತ್ತೆ ತೆವಳಿದಾಗ ಮೈಯೆಲ್ಲಾ
ಕಾದ ಬಾಣಲೆ ಎಣ್ಣೆಯಲ್ಲಿ ಅದ್ದಿದಂತಾಗಿ ಮೀನಾಕಾರದ
ಕಣ್ಣು ಬಿಟ್ಟಾಗ ಬವಣೆ ಯಮರಾಯನ
ಕುಣಿಕೆ ಪಾಶಕ್ಕೆ ಬೆವೆತು ನೀರಿನ ಹೊಳೆಯಲ್ಲಿ ಈಜಾಡಿ
ಮುಳುಗಿದ್ದೆ.

ಸೋಮವಾರ, ಜುಲೈ 13, 2020

ಕೆಂಪಿನ ಬಸ್ಸು




ನಮ್ಮ ಊರಿನ ಕೆಂಪಿನ ಬಸ್ಸು
ಭೇದಭಾವವನ್ನು ಎಂದೂ ತಿಂದಿಲ್ಲ
ಜೀವನ ವೈರಾಗ್ಯದ ಮುಪ್ಪನುಂಡಿಲ್ಲ
ಕಪ್ಪು-ಬಿಳುಪಿನ ಬಣ್ಣದ ಬೇರನ್ನು ಅಂಟಿಸಿಕೊಂಡಿಲ್ಲ
ಮುಂಭಾಗದ ನೆತ್ತಿ ದುರದುರ ದೃಷ್ಟಿಸುವವರನ್ನು
ಮೌನವಾಗಿ ಸ್ವಾಗತ  ಕೋರುತ್ತಾ,,,,,,,,
ಸವಾರ ಪ್ರಜೆಗಳ ಶುಚಿತ್ವಕ್ಕೆ ಕೈಗನ್ನಡಿಯಾಗಿದೆ
ಕಸದ ಬುಟ್ಟಿಯ ವಾಸಿಗರೆಲ್ಲ
ಸೀಟು , ಬೋಟಿನ ಕೆಳಗೆ
ವಾಯುವಿನ ಅಡ್ಡಾಟಕ್ಕಿರುವ ಕಿಟಕಿಗಳು
ಮಳೆರಾಯ ತೊಟ್ಟಿಕ್ಕುತ್ತಿದ್ದರೂ ಮಂಡೆ
ಕೆಡಿಸಿಕೊಳ್ಳುವ ಪರಿವಿಲ್ಲ
ಕಾಲೇಜು ಹೈಕಳ ಜ್ಞಾನ ಲಿಪಿಗಳು
ಶೈಲಿಗಳಲ್ಲಿ ಕೆತ್ತಲ್ಪಟ್ಟಿದ್ದರು ಬೇಸರವಂತು ಕಂಡಿಲ್ಲ
ಸೀಮೆಂಟು ಕಾಂಕ್ರೀಟು ರಂಗವಲ್ಲಿಯ
ತೋಡುಗಳಲ್ಲಿ ಬೀಗುತ್ತಿದ್ದ ರಾಜರಥ
ಸಿಗರೇಟು, ಬೀಡಿ , ಸಾರಾಯಿಗಳ
ಪರಿಮಳಕ್ಕೆ ಜೋತುಬಿದ್ದು
ಯಾವುದೇ ರಥಬೀದಿಯಲ್ಲಿ ಪ್ರಜೆಗಳ
ಅಣತಿಯಂತೆ ನಿಂತುಬಿಡುತ್ತಿತ್ತು
ಸದ್ದು-ಗದ್ದಲಗಳಲ್ಲಿ ಕಲ್ಲುಗಳನ್ನು ಬಾಚಿ
ತಿಂದು ನಜ್ಜುಗುಜ್ಜಾಗಿ ಗಲಗಲ ಸದ್ದುಳ್ಳ
ತಗಡಿನ ಡೋರು ನೇತಾಡುತ್ತಿದ್ದರು
ನನ್ನ ಸಮಯಕ್ಕೆ ಬೆಲೆಯಿತ್ತು ತಲುಪಿಸುತ್ತಿದ್ದ
ಬಸ್ಸಿಂದು ಮಂಗಳಸೂತ್ರ ಕಳೆದುಕೊಂಡವರಂತೆ
ಚಿಂತೆಯ ಅರೆನಿದ್ರೆಯಲ್ಲಿ ಬೇಯುತ್ತಾ ನಿಂತಿದೆ.



ಭಾನುವಾರ, ಜುಲೈ 12, 2020

ಸೂರ್ಯ -ಭೂಮಿ




ನನ್ನ  ಆತ್ಮ ದಂತ ಸೂರ್ಯ ಭೂಮಿಗೆ
ಒಂದು ವಸಂತ ತುಂಬಿದೆಯಂತೆ
ಹೆಮ್ಮೆತುಂಬಿದ  ಅಭಿನಂದನೆಗಳು
ಚಿರಋಣಿಯ ಕೃತಜ್ಞತೆ
ಎಲ್ಲೋ ಹೊತ್ತೊಯ್ದ ರೂಪನ್ನು
ಮತ್ತದೇ ಪ್ರತಿಬಿಂಬಿಸಿದ್ದಕ್ಕೆ
ಕೋಪ-ತಾಪದ ಅನುರಾಗಗಳೆಷ್ಟೋ
ಬಿಟ್ಟು ಬಿಡುವನೆಂಬ ಮುನಿಸುಗಳೆಷ್ಟೋ
ಮನ-ಮನಗಳ ಭಾವವೇದನೆ
ಪದಗಳಲ್ಲಿ ಅವರ್ಣೀಯ
ನಿರ್ಲಕ್ಷ್ಯದಲ್ಲಿ ಮನೆಮಾಡಿದ ಸೂರಲ್ಲಿ
ಆಂತರ್ಯ ಅರಿವಿನ ಅನಿವಾರ್ಯ ಹಂಗಿಲ್ಲ
ಇಳೆಯ ಜೀವಜಗತ್ತು ಮರೆಮಾಚಿ
ನಗುವ ಸೌರಮಂಡಲ ಒಡೆಯ
ಒಲುಮೆ ಒಲೆಯ ಹೊತ್ತಿಸದೆ ಸುಡುವ ಸೂರ್ಯ
ತನ್ನ ದಿಕ್ಕಿನ ಪರಿಯ ತಿಳಿಯಗೊಡುವುದಿಲ್ಲ
ತಟಸ್ಥತೆಯ ಒರತೆ ಹಾಸಿಹೊದ್ದು ಮೌನದ
ಕಾಯಿಗಳು ಹಲ್ಲು ಕಳೆದುಕೊಂಡರು
ಭುವಿಯ ಒಡಲು ಬತ್ತುವುದೆ .. . . . . ?
ಅದನರಿತ ಛಲವೊಂದೆ ಲಜ್ಜೆತೊರೆದು
ತಳ್ಳಿದರು ನವವಂಸತ   ಇದ್ದೆ  ತೀರುವೆನೆಂದು .




ಸೋಮವಾರ, ಜುಲೈ 6, 2020

Urban

The hills are always far away.
He knows the broken roads, and
movesIn circles tracked within
his head.Before he wakes and
has his say,The river which he
claims he lovesIs dry, and all
the winds lie dead.

At dawn he never sees the skies
Which, silently, are born again.
Nor feels the shadows of the
nightRecline their fingers on his
eyes.He welcomes neither sun
nor rain.His landscape has no
depth or height.

The city like a passion burns.
He dreams of morning walks,
alone,And floating on a wave of
sand.But still his mind its traffic
turnsAway from beach and tree
and stoneTo kindred clamour
close at hand.

Nissim Ezekiel
                                                                                                 

ನಗರ                                                                                     

ಬೆಟ್ಟಗಳು ಯಾವಾಗಲೂ ದೂರದಲ್ಲಿರುತ್ತವೆ.
ಮುರಿದ ರಸ್ತೆಗಳು ಮತ್ತು ಅವನ ತಲೆಯೊಳಗೆ ಗೆರೆ
ಹಾಕಲಾದ ವಲಯಗಳಲ್ಲಿನ ಚಲನೆಗಳು ಅವನಿಗೆ ತಿಳಿದಿದೆ.
ಅವನು ಎಚ್ಚರಗೊಳ್ಳುವ ಮೊದಲು ಮತ್ತು ಅವನ ಮಾತನ್ನು ,
ತಾನು ಪ್ರೀತಿಸುತ್ತೇನೆ ಎಂದು ಹೇಳಿಕೊಳ್ಳುವ ನದಿ ಒಣಗಿದೆ
ಮತ್ತು ಎಲ್ಲಾ ಗಾಳಿಗಳು ಸತ್ತಿವೆ.

ಮುಂಜಾನೆ ಅವನು ಆಕಾಶ ನೋಡುವುದಿಲ್ಲ
ಇದು , ಮೌನವಾಗಿ ಮತ್ತೆ ಜನಿಸುತ್ತದೆ
ರಾತ್ರಿಯ ನೆರಳುಗಳನ್ನು ಅನುಭವಿಸುವುದಿಲ್ಲ
ಅವನ ಕಣ್ಣುಗಳ ಮೇಲೆ ಬೆರಳುಗಳನ್ನು ಓರೆಯಾಗಿಸಿ
ಅವನು ಸೂರ್ಯ ಅಥವಾ ಮಳೆಯನ್ನು ಸ್ವಾಗತಿಸುವುದಿಲ್ಲ
ಅವನ  ಭೂದೃಶ್ಯಕ್ಕೆ ಆಳ ಅಥವಾ ಎತ್ತರವಿಲ್ಲ .

ನಗರ ಉತ್ಸಾಹ /ಭಾವೋದ್ರೆಕದಿಂದ ಉರಿಯುತ್ತದೆ.
ಅವನು ಬೆಳಿಗ್ಗೆ ಏಕಾಂಗಿಯಾಗಿ ನಡೆಯುವ ಕನಸು ಕಾಣುತ್ತಾನೆ
ಮತ್ತು ಮರಳಿನ ಅಲೆಯ ಮೇಲೆ ತೇಲುತ್ತಾನೆ.
ಆದರೆ ಇನ್ನೂ ಅವನ ಮನಸ್ಸು ದಟ್ಟಣೆಯ ತಿರುವುಗಳು  ,
ಕಡಲತೀರ ಮತ್ತು ಮರ ಮತ್ತು ಕಲ್ಲಿನಿಂದ ದೂರ ಸರಿಯುತ್ತದೆ
ಕೈಯ ಹತ್ತಿರದಲ್ಲಿರುವ ನಂಟಿನ ಗದ್ದಲಗಳಿಂದ. 

ಸೋಮವಾರ, ಜೂನ್ 29, 2020

ಮನ -ಮಸಣದಲ್ಲಿ ಶಾಲೆ


ಮನ -ಮಸಣದಲ್ಲಿ ಶಾಲೆ


ಮನ- ಮಸಣ ಅಕ್ಷರಗಳ ವ್ಯತ್ಯಾಸದಲ್ಲಿ
ಹುಟ್ಟುವ ಹಳೆಯದಾದರೂ  ಹೊಸ ನಂಟು
ಮಕ್ಕಳಿಲ್ಲದ ಶಾಲೆ ಮಸಣದ ಭಾಸ
ಮಸಣ ಕಾಯುವವನು
ಆಲಸಿ ಆಚಾರ್ಯ
ಮೌನಕ್ಕೂ ಮೌನ ಕಲಿಸುವ ನಿಶ್ಯಬ್ದತೆ
ನಿಗೂಢ ಶಬ್ದದೊಂದಿಗೆ ಆಗಾಗ್ಗೆ ಬಂದು
ಏನಾದರೂ ಅರ್ಥ ಕೊಟ್ಟು ಹೋಗ್ವ ತಂಗಾಳಿ
ಮನಕ್ಕೆ ಬಡಿದಿದ್ದ ಪೈಶಾಚಿಕತೆ ಶಾಲೆಯ
ತುಂಬೆಲ್ಲಾ ನಲಿದಾಡುತ್ತಿದೆ
ಮಕ್ಕಳ ಆರ್ಭಟಕ್ಕೆ ಗುಡುಗಿದರು ಅಲುಗದ ಶಾಲೆ
ಗುಂಡುಸೂಜಿ ನೆಲಅಪ್ಪಿದರು
ಕರಾಳ ಅಳುವು
ನೀರಿದ್ದರು ಜೀವ ಕಳೆದುಕೊಂಡು
ತೊಟ್ಟಿಕ್ಕುತ್ತಿರುವ ನೀರಕೊಳವೆಗಳು
ಬೋರ್ಡು , ಕಾರ್ಡು , ಬೆಂಚುಗಳ
ಮಾಲೀಕತ್ವ ವಹಿಸಿರುವ ಇಲಿರಾಯ
ತನ್ನದೆ ಕಾರುಬಾರು ನಡೆಸಿದ್ದಾನೆ
ಹೂ-ಗಿಡ , ತರಗೆಲೆಗಳು ಮಕ್ಕಳ
ಆರೈಕೆ ಅರಸಿ ಬರುವಿಕೆಗಾಗಿ ಬಾಗಿ
ಸ್ವಗತ ಕೋರುತ್ತ ಭೂತಬಂಗಲೆಯ
ಸೇವಕರಾಗಿ ನೇಮಕಗೊಂಡಿವೆ
ಆಟದ ಮೈದಾನಗಳು ಮಾನವ ಕೃತ್ಯಕ್ಕೆ
ರಣರಂಗದ ಅವಶೇಷವಾಗಿವೆ
ಇದ್ದಾಗ ತಿಳಿಯದ ಅರಿಯದ ಪ್ರೀತಿ
ಸ್ವಲ್ಪ ಸ್ವಲ್ಪವೇ ಅರಿವಿನ ಗುಳಿಗೆ ನುಂಗಿಸುತ್ತಿದೆ
ಕಾಡುವ ಪಾಪಪ್ರಜ್ಞೆಯಲ್ಲಿ ಮುಳುಗೇಳುವ ಅಜ್ಞಾತವಾಸ,

ಬುಧವಾರ, ಜೂನ್ 24, 2020

ಚಪ್ಪಲಿಗಳು

ಓ...ಬಣ್ಣ ಬಣ್ಣದ ಚಪ್ಪಲಿಗಳೇ
ನಿಲ್ಲಿರಿ ಸ್ವಲ್ಪ
ಮನಸ್ಸಿಲ್ಲವೆ... ದಣಿವಾಗುವುದಿಲ್ಲವೆ...?
ಯಜಮಾನನ ಅಣತಿಗೆ
ಎಲ್ಲೆಂದರಲ್ಲಿ ಹೋಗುತ್ತಿರಲ್ಲ...?
ನಿಮ್ಮ ಮೇಲೆ ಕಾಲೂರುವ
ಅರ್ಹತೆ ಇದೆಯೇ ನನಗೆ ....,
ಯೋಚಿಸುವುದಿಲ್ಲವೆ...ವಿನಯತೆಯೆ.....
ತುಳಿದರು...ಹೊಲೆದರು
ಮಣ್ಣಲ್ಲೇ ಹೂತರು ಬೇಸರವಿಲ್ಲ
ಸದಾ ಸೇವೆಗೆ ನಿಮ್ಮ ಹಾಜರಿ
ಒಂದು ಜೀವ ತೆತ್ತರೆ
ಇನ್ನೊಂದು ಒಂಟಿಯಾಗಿ ರೋಸುವುದು
ಪಾದಗಳ ಪಾಲಕ
ಕಿಂಚಿತ್ತೂ ಬೆಲೆಯಿಲ್ಲ
ಎಂದೂ ಹೊಸ್ತಿಲ ಹೊರಗೆ
ಸ್ವಾರ್ಥ ಜಗತ್ತಿನ ಅರಸಿಗಳು ನಾನು
ಮಳೆ ಬಿಸಿಲಿಗೆ ಮೈ ನೆನೆಸಿ ಮುಳ್ಳುಗಳೇ
ಮುತ್ತಿಕ್ಕಿದರು ತೋರಿಕೆಯಿಲ್ಲದ ಮೃದುತ್ವ
ಅದು ನನಗಿಲ್ಲವಾಯಿತ್ತಲ್ಲ..?
ಹೇ....ಜೋಡೆ...
ನನ್ನಂತೆ ಜೀವ ತುಂಬಿಕೊ಼ಂಡಿದ್ದರೆ
ನಾನಾಗಿರುತ್ತಿದ್ದೆ ನೀನು
ಚಮ್ಮಾರನ ಛಾವಣಿಯ ಅನ್ನದಾತನ
ವಿಶಾಲ ಮನಸ್ಥಿತಿ ನನಗಿಲ್ಲವಲ್ಲ
ಬೆಡಗು -ವಯ್ಯಾರಕ್ಕೆ
ಧರಿಸಿದರು ಸಮಾನತೆ ಬಾಳ್ವೆ
ಸ್ವಾರ್ಥ ಮನಸ್ಸುಗಳಿಗಾಗಿ ಸವೆವ
ನಿಷ್ಕಲ್ಮಶ ಔದಾರ್ಯ
ನಿನ್ನ ಮೆಟ್ಟುವ ನನ್ನಲ್ಲಿ ನಾ ಕಾಣೆ
ಯಾಕೆಂದರೆ ನನ್ನಲ್ಲಿ , ನನ್ನಲ್ಲಿರುವುದು
ಮನುಜರ ಗುಣ.

ಗುರುವಾರ, ಜೂನ್ 18, 2020

ಮನ -ಮನಗಳ ಮಾತು




ಮನಸ್ಸು -1 : ಏನಿದೆ  ಜೀವನದಲ್ಲಿ ......?
ಮನಸ್ಸು -2 : ಏನಿಲ್ಲಾ...??ಜೀವನದಲ್ಲಿ...?

ಮನಸ್ಸು -1 : ನಿನ್ನ ಬಿಟ್ಟು ಉಳಿದೆಲ್ಲ
ಮನಸ್ಸು -2 : ಮೌನ

ಮನಸ್ಸು -1 : ಏನಿದ್ದರೇನು..?ನೀನಿಲ್ಲದೆ
                   ಶೂನ್ಯ
ಮನಸ್ಸು -2 : ಆಲಿಸಿ , ಆಲೋಚಿಸುವ
                    ಶಕ್ತಿ ಇದೆಯೇ......

ಮನಸ್ಸು -1 : ಇದ್ದರು..ಆಲಿಸುತ್ತಿಲ್ಲ
ಮನಸ್ಸು -2 : ನಿನ್ನ ಎಂಬುದ ಬಿಟ್ಟು ನಿನಗಾಗಿ
                      ಎಂಬುದನ್ನು ಕಿವಿಗೊಡು

ಮನಸ್ಸು -1 :  ಸಾಧ್ಯವೇ.....?
ಮನಸ್ಸು -2 : ಪ್ರೀತಿಸುವ ,ದ್ವೇಷಿಸುವ
                   ಮನಸ್ಸಿಲ್ಲ

ಮನಸ್ಸು -1:  ನೋವಲ್ಲೆ ಕೊನೆಯುಸಿರು
ಮನಸ್ಸು -2 :  ತನ್ನಂತೆ ತಟಸ್ಥ.

ಸೋಮವಾರ, ಜೂನ್ 8, 2020

ಆಶಯ



ನನ್ನದೆಂದ ಕವಿತೆಗೆ ಏಕಾಂತದ
ಹಮ್ಮು -ಬಿಮ್ಮು
ಕವಿತೆ ಆಶಯ ಮೂಕರಾಗ
ಕವಿತೆ ಭಾವವೊ.. ಭಾವೋದ್ವೇಗವೊ ..
ಕಲ್ಲ ಮನಸ್ಸಿನ ಪ್ರತಿಬಿಂಬದ ಛಾಪೊ..
ಬೇಸಿಗೆಯ ಕಡು ಬಿಸಿಲೊ..
ನೋವಿನ ಕೂಪವೊ ..
ಬೇಸರದ ಸೂರ್ಯನೆತ್ತಿ ರೂಪವೊ ..
ಪ್ರಶಂಸೆಯ ದಿಕ್ಕೊ ...
ಬಿಡಿಸಲಾಗದ ಕಗ್ಗಂಟು
ಪ್ರೀತಿಯ ಕುಣಿಕೆಯೊ..
ಸ್ಫೂರ್ತಿಯೊ .. ಆಸರೆಯೊ...
ಸಾಂತ್ವನವೊ ...
ಜ್ಞಾನದ ಜಾಣ ಕುರುಡೊ...
ಬದುಕಿನ ಬರಸಿಡಿಲೊ ...
ಒಂಟಿತನದ ಬುತ್ತಿಯೊ..
ನಂದಾದೀಪವೊ... ಅರಿವಿಲ್ಲ
ಅಷ್ಟಾದರೂ.. ಕವಿತೆ ಸ್ಪಂದಿಸುವ
ದರ್ಜೆ ವುಳ್ಳದ್ದಾಗಿದ್ದರೆ ...??
ಕಾಡುವ.. ಹತ್ತಾರು ಯಕ್ಷ ಪ್ರಶ್ನೆ.


ಬಳ್ಳಿ




ಮಣ್ಣಿನ ಕಣ್ಣೊಳಗೆ
ಹುದುಗಿಟ್ಟ ಮೊಳಕೆಯು
ಬಳ್ಳಿಯಾಗಿ ಬೆಳೆದು
ಬಾಂದಳದಲ್ಲಿ ಮೊಗ್ಗಾಗಿ
ಭುವಿಯಲ್ಲಿ ಹೂವಾಗಿ
ಬಾವುಲಿ ಕಾಟಕ್ಕೆ ಕಪ್ಪಾಗಿ
ಪಟ ಪಟ ರೆಕ್ಕೆ ಬಡಿದು
ತನ್ನೊಳಗೆ ಒದ್ದಾಡಿ
ಬಡಿದಾಡಿ, ಗುದ್ದಾಡಿ
ನಿಲ್ಲಲು ತಿಣುಕಾಡಿ
ಅಸುನೀಗುತಿಹುದು

* * * * * * * *
 ಓ.. ವಿಧಿಯೇ...
ಏಕೆ.. ಇಷ್ಟೊಂದು ಘೋರ ನೀನು..?
ಒಲವನ್ನು ಹೊತ್ತು
ನೋವನ್ನು ಬಿತ್ತಿ.. ಸೆಳೆದುಬಿಟ್ಟೆಯಾ..
ಸ್ವಲ್ಪವಾದರೂ ಕರುಣೆ
ಇಲ್ಲದಾಯಿತೇ....
ಪ್ರೀತಿಸುವ ಜೀವಗಳ
ಅಗಲಿಸುವುದರಲ್ಲೇನಿದೆ..
ನಿನಗೆ ಆಹ್ಲಾದ..??
ಕಂದಮ್ಮ ಕಣ್ಣು ಮಿನುಕಿಸುವ
ಮೊದಲೇ ಸೃಷ್ಟಿಕರ್ತನ
ಮರಣ ಪಲ್ಲಕ್ಕಿಯಲ್ಲಿ ಮಲಗಿಸಿ ಬಿಟ್ಟೆಯಲ್ಲ
ಕಟ್ಟಿದ ಕನಸಿನ ಗೋಪುರದ
ಅಡಿಪಾಯ ಕೆಡವಿ ಬಿಟ್ಟೆಯಲ್ಲ
ಸಹಿಸುವ ಶಕ್ತಿಯಾದರೂ.. ಹೇಗೆ..?
ನೀನೇ ಹೇಳು..ಓ ಶೂರ ವಿಧಿಯೇ..
ನಿನಗಿಲ್ಲವೇ..  ಅಂತಃಕರಣ?? ಓ.. ವಿಧಿಯೇ...
ಓ... ಘನಘೋರ... ನೀಚ.. ಕ್ರೂರ ವಿಧಿಯೇ..
         

ಭಾನುವಾರ, ಮೇ 31, 2020

ಅಂತರಂಗ

ನಾ...ಬೀಗಿ ಬಾಗಿದ್ದೆ
ನನ್ನೊಳಗಿನ ಭಾವುಕತೆಯ
ಅಂತರ್ಯಾಮಿ
ಸದಾ... ಹಸಿರೆಂದು
ಇಂದು ಬರಲೊಲ್ಲದೆ
ಮುನಿಸಿನ ಪಟ್ಟಿ ಧರಿಸಿ
ನಯನ ಒಲವಾಗಿಸಿ, ಜಡಗಟ್ಟಿವೆ
ತಲೆಭಾರದ ಹರಿವು
ಚಿತ್ತದಲ್ಲಿ  ಮಡುಗಟ್ಟಿ
ಕವಲೊಡೆಯುತ್ತಿವೆ.
ಆಹ್ವಾನವಿತ್ತು,  ಅಂಗಲಾಚಿದರೂ
ಕೋಪದ ಪಟ್ಟಿಯ ದಿರಿಸು
ಬಿಚ್ಚಲೊಲ್ಲದೆ.. ನನ್ನಲ್ಲೇ
ದಿಕ್ಕು ಬದಲಿಸಿ ಬತ್ತಿದೆ
ಭಾವಸೆಲೆಯಾಗಿ,, ಅಂತಃಕರಣ
ಕೊರೆದು ಸುರಂಗವಾಗಿಸಿ
ಅವಿತುಬಿಟ್ಟಿವೆ.

ಶನಿವಾರ, ಮೇ 30, 2020

ಅಂತರ್ಯಾಮಿ


ಒಲವಿನ ಕಾನನದಿ
ಅಲ್ಪದಿ ಹೊಕ್ಕಿದ
ಆತ್ಮದ  ರೂಪವು
ಬರಸಿಡಿಲು ಬಡಿದು
ಎತ್ತೊಯ್ದು...ಮಳೆಯಾಗಿ
ಚೆಲ್ಲಿದಾಗ...!
ಸಾವಿನ ಶೋಕವು ಹೆಪ್ಪಾಗಿ
ಮಂಜುಗಡ್ಡೆಯಲ್ಲಿ ಘನೀಕರಿಸಿ
ಅಳಿವುಳಿವಿಗೋಸುಗ
ಅನಿವಾರ್ಯ ತಾಪಕ್ಕೆ
ಹನಿ ಹನಿ ರಕ್ತ
ರಾಶಿಯಾಗಿ
ಹರಿಯುತಲಿಹುದು
ಹರಿಯುತಲಿಹುದು..
ಹರಿಯುತಲೇ ಇರುವುದು
ಮಣ್ಣಿನ ಸೊಗಡು ಮೆತ್ತುವವರೆಗು.
 

ಗುರುವಾರ, ಮೇ 28, 2020

ಕೂಸು


ಮುಂದೊಂದು ಜನ್ಮದಲ್ಲಿ
ನಿನ್ನಿಂದ ಕೂಸಾಗಿ ಹುಟ್ಟಿ
ಕೈ ಬೆರೆಳು ಹಿಡಿದು ನಡೆವಾಸೆ
ನಿನ್ನ ಬಿಗಿದಪ್ಪುವಾಸೆ
ನಿನ್ನ ತೋಳಲ್ಲಿ ಮಲಗುವಾಸೆ
ಸಿಹಿ ಮುತ್ತು ಪಡೆವಾಸೆ
ಕೈ ತುತ್ತು ತಿನ್ನುವಾಸೆ
ನಗು ಮೊಗಕ್ಕೆ ಚುಂಬಿಸುವಾಸೆ
ನಿನ್ನ ಬಾಯಿಗೆ ಬೈಗುಳವಾಗುವಾಸೆ
ಬೆತ್ತದ ಪೆಟ್ಟು ತಿನ್ನುವಾಸೆ
ನಿನ್ನೊಂದಿಗೆ ಹಟಬೀಳುವಾಸೆ
ಮುನಿಸಲ್ಲಿ ನಿನ್ನ ಮೌನವಾಗುವಾಸೆ
ನಿನ್ನ ನೆರಳಲ್ಲಿ ಹಬ್ಬುವ ಬಳ್ಳಿಯಾಗುವಾಸೆ
ಅಳುವಲ್ಲಿ ಸಾಂತ್ವನವಾಗುವಾಸೆ
ನಗುವಿನ ಆನಂದಬಾಷ್ಪವಾಗುವಾಸೆ
ಕಷ್ಟದಲ್ಲಿ ಹೆಗಲಾಗುವಾಸೆ
ಸುಖದಲ್ಲಿ ಜೊತೆ ನಲಿವಾಸೆ
ಮಮತೆ, ವಾತ್ಸಲ್ಯಕ್ಕೆ ಅಮ್ಮನಾಗುವಾಸೆ
ಮಡದಿಯ ಒಲವಾಗುವಾಸೆ
ಧ್ಯಾನದಲ್ಲಿ ನಿನ್ನ ಏಕಾಂತವಾಗುವಾಸೆ
ಜೊತೆಯಿರುವ ಲೇಖನಿಯಾಗುವಾಸೆ
ಆಸಕ್ತಿಯ ಹವ್ಯಾಸಗಳಾಗುವಾಸೆ
ಪ್ರೀತಿಯಲ್ಲಿ ಹೂವಾಗುವಾಸೆ
ನೀ ಹಡೆವ ಕವಿತೆಗಳಾಗುವಾಸೆ
ಸಾಧನೆಗೆ ಜ್ಞಾನದ ಹೊತ್ತಿಗೆಯಾಗುವಾಸೆ
ನಾ..ಇರುವವರೆಗೂ....ನಿನ್ನೊಂದಿಗೆ ಇರುವಾಸೆ.


ಬುಧವಾರ, ಮೇ 27, 2020

ನನ್ನ ಕವಿತೆಯ ಪರಿವು




ಕವಿತೆಯ ಕಾವ್ಯ ನೀನು
ಕಾವ್ಯದ ಭಾವ ನೀನು
ಕಾವ್ಯದ ವಸ್ತು ನೀನು
ಕಾವ್ಯದ ಕಲ್ಪನೆ ನೀನು
ಕಾವ್ಯದ ಹುಟ್ಟು ನೀನು
ಕಾವ್ಯದ ಭಾಷೆ ನೀನು
ಕಾವ್ಯದ ರಚನೆ ನೀನು
ಕಾವ್ಯದ ಪ್ರಾಸ ನೀನು
ಕಾವ್ಯದ ಲಯ  ನೀನು
ಕಾವ್ಯದ ಜೀವ ನೀನು
ಕಾವ್ಯದ ಆಶಯ ನೀನು
ಕಾವ್ಯದ ಒಳಹರಿವು ನೀನು
ಕಾವ್ಯದ ಬದುಕು ನೀನು
ಕಾವ್ಯದ ಅಲಂಕಾರ ನೀನು
ಕಾವ್ಯದ ಛಂದಸ್ಸು ನೀನು
ಕಾವ್ಯದ ಸ್ಫೂರ್ತಿ ನೀನು
ಕಾವ್ಯದ ಸೆಲೆ ನೀನು
ಕಾವ್ಯದ ಪ್ರತಿಮೆ ನೀನು
ಕಾವ್ಯದ ಕೃತಿಯು ನೀನು
ಕಾವ್ಯದ ಕರ್ತೃ ನೀನು
ಕಾವ್ಯದ ತರ್ಜುಮೆ ನೀನು
ಕಾವ್ಯದ ರಸೌಚಿತ್ಯ ನೀನು
ಕಾವ್ಯದ ವಿಮರ್ಶೆ ನೀನು
ಕೊನೆಗೆ.....
ಕಾವ್ಯದ ಕವಿಯೂ ನೀನೆ.
         

ಮನ

ಮಣ್ಣ ಘಾಟು ಬಡಿದು
ಸುವಾಸನೆ ಮಂಪೇರಿಸಿ
ಮೂಗಿಗೆ ಬೇಲಿಕಟ್ಟಿ
ಮಣ್ಣ ಸಂಗ ಬಯಸುತ್ತಿದೆ ಮನ.. !

ಮಣ್ಣ ಪುಟ್ಟ ಪುಟ್ಟ ಕಂದಮ್ಮಗಳು
ಸಣ್ಣ ಹೊಟ್ಟೆಗೆ ಚಪ್ಪರಿಸಲು
ಆಹಾರವಾಗುತ್ತ ನಂಟು ಬಿತ್ತಲು
ಹಂಬಲಿಸುತ್ತಿದೆ ಮನ.. !

ಮಣ್ಣ ಅಣುಗಳ ಬೆವರಲ್ಲಿ
ಕೊಳೆತ ಹೂವಾಗಿ ಬಾಳಲು
ಕುಣಿಯುತ್ತಿದೆ ಮನ.. !

ಮಣ್ಣ ಹಸಿ ತೇವದೊಳಗೆ
ದೇಹವನ್ನು ಉಜ್ಜಿ ಮೆತ್ತಿಕೊಳ್ಳಲು
ಹಾತೊರೆಯುತ್ತಿದೆ ಮನ.. !

ಮಣ್ಣ ವಿಶಾಲ ಆಗಸದಲ್ಲಿ
ಅರೆಬೆಂದ ನೆನಪನ್ನು ಹಚ್ಚುತ್ತಾ
ನಿರಾಳತೆಯನ್ನು ತನ್ನದಾಗಿಸಿ
ಬಾಳ ಅಮಾವಾಸ್ಯೆ ನೆನೆದು
ಕಾಲುಚಾಚಿ ನಿದ್ರಿಸಲು
ತವಕಿಸುತ್ತಿದೆ ಈ ನನ್ನ ಮನ.. !!
 

ಮಂಗಳವಾರ, ಮೇ 26, 2020

ನೋವು

ಚುಚ್ಚಿ ಚುಚ್ಚಿ ಮುಕ್ಕುವ
ಹದ್ದುಗಳ ನಡುವೆ
ಒಲವ ಕಟ್ಟೆಯ ಹೂರಣ
ಮೂಕ ಮನಸ್ಸಿನ
ನೂರಾರು ನೋವ ರಂಧ್ರಗಳು
ಸೊಕ್ಕಿನ ಬರಸಿಡಿಲು ಬಡಿದು
ಮುಚ್ಚಲೆತ್ನಿಸಿದರೂ..
ಆಗಾಗ್ಗೆ ತೆರೆದುಕೊಳ್ಳುತ್ತವೆ
ಪರಿ ಹೇಗಿದೆಯೆಂದರೆ
ಅವುಗಳೂ.. ಪರಿಸ್ಥಿತಿ ಅಣುಕಿಸಿ
ಕೇಕೆ ಹಾಕಲಾರಂಭಿಸಿವೆ
ಭಯವಿಲ್ಲವೀಗ..ಸೆಟೆದು ನಿಂತಿವೆ
ಬಂದ ನೋವಿನ ಉಂಡೆಗಳನ್ನು
ಗುಳುಂ ಎಂದು ನುಂಗಿ
ಗಹ ಗಹನೇ ನಕ್ಕು
ನೀರು ಕುಡಿದು.. ಬಾಯಿ ಒರೆಸಿಕೊಳ್ಳುತ್ತಿವೆ
ಇನ್ನಾ.. ಬರುವುದಾದರೆ ಬರಲಿ
ಎಂದು ಹಸಿವಿನ ಬಾಯಾರಿಕೆಗೆ
ಬಾಯ್ತೆರೆದು ನಿಂತು ಬಿಟ್ಟಿವೆ.

ಸೋಮವಾರ, ಮೇ 25, 2020

ಅಂತರಂಗ

ಮನಸ್ಸು ಕನಸ್ಸಿನೊಳಗೊಂದು
ಪುಟ್ಟ ಹಕ್ಕಿ...!!
ಗೂಡು ಕಟ್ಟಿ ನಲುಗುತಿಹುದು
ಕತ್ತಲ್ಲನ್ನೇ ಹೊತ್ತಿದ್ದರು
ಸದಾ ಇಣುಕುತ್ತಿರುತ್ತದೆ
ಅದಕ್ಕೂ.. ಕಣ್ಣು.. ಕಿವಿ..
ಮನಸ್ಸು... ಇದ್ದಿರಬಹುದು!
ಉಸಿರಾಡಲು ಹವಣಿಸುತ್ತಿರುತ್ತದೆ
ನಿರಾಸೆಯ ಗುಳ್ಳೆಗಳನ್ನು ಅಂಟಿಸಿಕೊಂಡು
ಭರವಸೆಯ ಗಂಟು
ಹೊದ್ದು ನಿದ್ರಿಸುತ್ತಿರುತ್ತದೆ
ಒಳ ಇರಲೂ.. ಒಲ್ಲದು
ಹೊರಹೋಗಲು ಕಾಲಿಲ್ಲ
ಅದರ ಖಂಡನೆ ಸಲ್ಲದು
ಸೂರ್ಯ ತೇಜಸ್ಸಿನ ಕಿರಣ ಪ್ರಭೆ
ಪುಟ್ಟ ರಂಧ್ರ ಸೃಷ್ಟಿಸಿ
ಹೊರ ತೇಲಿಸ ಬಹುದೆಂಬ
ಆಶಾಭಾವದ ಕಪ್ಪುಛಾಯೆ
ಎಂದಿಗೋ.. ಮೂಕವೇದನೆಗೆ
ಬಿಡುಗಡೆಯ ಮರೀಚಿಕೆ
ಇಂದಿರಾ..ಚಂದಿರ.. ಆಚಾರ್ಯರಿಂದ.

ಒಬ್ಬಂಟಿ

ಏಳುಬೀಳಿನ ಬಾಳ ಪಥದಲ್ಲಿ
ಒಬ್ಬಂಟಿ ಧ್ಯಾನ..!
ಭಾವನೆಗಳು ತಲೆಶೂಲ
ಏಕಾಂತ ಹಿತವೆನಿಸಿ
ಸಾನಿಧ್ಯ ಸಾಕೆನಿಸಿ
ನೆನಪಿನ ದಾರಿ ಸವೆದು
ಆಹ್ವಾನ ಬೇಡೆನಿಸಿ
ಸಿಹಿ ನೆನಪು ಉಪ್ಪಿನ ಮುಪ್ಪಾಗಿ
ತಳ್ಳಿದಷ್ಟು ದೂರ.. ಸಾಗಿ
ಮನಸ್ಸಿನ ಮರ್ಕಟ ತಿಂದು
ಮಣ್ಣಾ ಕಣದ ಅಣುವಾಗಿ
ಹೆಬ್ಬಂಡೆ ತಾಕಿದರು..
ಅಲುಗಾಡದಂತೆ
ವಾರಿಧಿಯ ಭೋರ್ಗರೆತದೊಳಗೆ
ಮರೆವಿನ ಕಂಬಳಿ ಹೊದ್ದು
ಮರುಜನ್ಮ ಅರಸಿ
ಮಗುವಾಗಿ
ಮಲಗಿಬಿಡುವಾಸೆ.

ಖಾಲಿಯಾಗಿದೆ ಭಾವನೆಗಳು







ಸೋಮವಾರ, ಮೇ 18, 2020

ಪನ್ನೀರು



   ಜಲ ಜಲನೇ ಹರಿವ ನೀನು
   ಅದೆಷ್ಟು ಚಂದ...
   ಅದ್ಹೇಗೆ  ಹಗುರಾಗಿಸುತ್ತೀಯೋ   
   ಮನವ ನನ್ನ ಗೆಳೆಯ
   ಕೆನ್ನೆಗಳಿಗೆ ಮುತ್ತಿಕುತ್ತಾ
   ಸ್ಪರ್ಶಿಸುವ ನೀನು
   ಭಾವನೆಗಳ ಜಲಧಿ
   ಭಾವೋದ್ರೇಗಕ್ಕೂ ಸೈ !
   ನನ್ನೊಳಗೂ... ಜೈ
   ಮನವನ್ನು ಮುದುಡಿ ಅರಳಿಸುವೆ
   ನನ್ನ ಅಪ್ಪಿಯಂತೆ
   ದಿನಕ್ಕೊಮ್ಮೆಯಾದರೂ ನೀ ಇಣುಕುವೆ
   ಮುತ್ತಿಕ್ಕಿ ಅಪ್ಪುವೆ
   ಅಪ್ಪಿ ಮುತ್ತಿಕ್ಕುವೆ
   ಅಳಿಸಿ  ಅಳಿಸಿ ನಗುವೆ..
   ಅಳಿಸಿ ಅಳಿಸಿ ನಗಿಸುವೆ..
   ಕೊನೆಗೆ  ಬಿಟ್ಟು ಜಿಗಿವೆ.
   ನನ್ನೊಳಗಿನ ಪ್ರಾಣಪಕ್ಷಿಯಲ್ಲಿ.

  

ಭಾನುವಾರ, ಮೇ 10, 2020

ಕಾಜೂರು ಸತೀಶ್ ಸರ್

   
         ನನ್ನ ಈ  ಲೇಖನ  ಕೊಡಗಿನ ಪ್ರತಿಭಾನ್ವಿತ ಕವಿ ಹಾಗು ತನ್ನ ಕೌಶಲ್ಯವನ್ನು ವಿವಿಧ ಆಸಕ್ತಿಯ ಭಿನ್ನತೆ ಮೆರೆಯುವ ಕೊಡಗಿನ ಪ್ರತಿಭಾನ್ವಿತ., ಸಂವೇದನಾಶೀಲ ಯುವ  ಕವಿ.. ಶಿಕ್ಷಕ.. ಅನುವಾದಕ.. ಸಾಹಿತಿ.. ಚಿಂತಕ  ಕಾಜೂರು ಸತೀಶ್ ರವರ ಬಗ್ಗೆ.

       
      ಶ್ರೀ. ನಾರಾಯಣ್ ಮತ್ತು  ಶ್ರೀಮತಿ. ವಿಶಾಲಾಕ್ಷಿ ಯವರ ಪ್ರೀತಿಯ ಪುತ್ರ K. N. ಸತೀಶ್. ಇವರ ವಾಸ್ತವ್ಯ ಸೋಮವಾರಪೇಟೆ ತಾಲೋಕಿನ ಕಾಜೂರು ಗ್ರಾಮ.
     
         ಸತೀಶ್ ರವರ ಕವಿತೆಗಳನ್ನು ಜೀರ್ಣಿಸಿಕೊಳ್ಳಲು ಎರೆಡೆರೆಡು ಬಾರಿಯಾದರೂ ಓದುವ ನಾನು ಅವರ ಕವಿತೆಗಳ ಬಗ್ಗೆ ಏನು ಹೇಳಲು ಸಾಧ್ಯ..? ಎಂಬ ಪ್ರಶ್ನೆ ಆಗಾಗ್ಗೆ ಕಾಡುತ್ತಿರುತ್ತದೆ. ಇರಲಿ..... ಅನ್ನಿಸಿದ್ದನ್ನು ಹೇಳುವುದರಲ್ಲಿ ತಪ್ಪಿಲ್ಲವೆಂದು ಭಾವಿಸುತ್ತೇನೆ.
   
      2015ರ " ಕಡೆಂಗೋಡ್ಲು  ಶಂಕರಭಟ್ಟ  ಕಾವ್ಯ ಪುರಸ್ಕಾರ " ಪಡೆದ ಸತೀಶ್ ರವರ ಮೊದಲ  ಕವನ ಸಂಕಲನ "ಗಾಯದ ಹೂವುಗಳು "  ಮತ್ತು ಮಲಯಾಳಂ ಕವಿತೆಗಳ ಅನುವಾದಿದ ಪುಸ್ತಕ "ಕಡಲಕರೆ "ಗೆ..ತಡವಾಗಿಯಾದರೂ ಶುಭಾಶಯಗಳನ್ನು  💐💐ತಿಳಿಸುತ್ತಾ... ಮುಂದುವರೆಯುತ್ತೇನೆ.
     
                            ನಾ ಅರಿತಂತೆ ಸತೀಶ್ ರವರ  ಕವಿತೆಗಳಲ್ಲಿ ಅವರಂತೆ ಉತ್ಸಾಹವಿದೆ.ಸಾಮಾನ್ಯ ಓದುಗರನ್ನು ಯೋಚನಾ ಮಗ್ನರನ್ನಾಗಿಸುವ ಶಕ್ತಿ ಇದೆ. ಇಂದಿನ ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಆಕ್ರೋಶವಿದೆ. ಬೇಸರ, ಕಾಳಜಿ, ನೋವು, ಸಮಾನತೆಗಾಗಿ ಹಂಬಲ, ಭ್ರಷ್ಟಾಚಾರದ ವಿರುದ್ದ ದನಿ, ಪರಿಸರ ಕಾಳಜಿ.. ಇವುಗಳು ಅವರ ಕವಿತೆಯಲ್ಲಿ ಉಸಿರಾಡುತ್ತವೆ. ಸತೀಶ್ ರವರು  ಕವಿತೆಗಳನ್ನು ಹಡೆಯುವ ಪರಿ ನಮ್ಮಂಥ ಸಾಮಾನ್ಯ ಓದುಗರನ್ನು ಚಿಂತನಾಶೀಲರನ್ನಾಗಿಸುತ್ತದೆ.

     ಬುದ್ಧನ ತತ್ವಗಳಿಗೆ ಶರಣು ಹೋಗಿರುವ ಸತೀಶ್ ರವರು.. ಓದನ್ನು ಸಂಗಾತಿಯನ್ನಾಗಿಸಿ ಕೊಂಡಿದ್ದಾರೆ. ಹೆಚ್ಚಾಗಿ ಏಕಾಂತವನ್ನು ಪ್ರೀತಿಸಿ.. ಅಪ್ಪಿರುವ ಇವರು ಏಕಾಂತ ಪರಿಭಾವಿ. ಶಿಕ್ಷಕರಾಗಿಯೂ ಹೆಚ್ಚಿನ ಜ್ಞಾನ ಹೊಂದಿರುವ ಇವರು ಎಲ್ಲರೊಂದಿಗೂ ಸ್ನೇಹಜೀವಿ. ಯಾವುದೇ ವೃತ್ತಿ /ಸೇವೆ ಕೊಟ್ಟರು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುವ ಮೃದು ವ್ಯಕ್ತಿತ್ವದ ಆಶಾಭಾವಿ.
 
ಸೂಕ್ಷ್ಮ ದೃಷ್ಟಿಕೋನದಲ್ಲಿ ಗಮನಿಸಿದಾಗ ಭಿನ್ನರಲ್ಲಿ ವಿಭಿನ್ನರಾಗಿ ಕಾಣುವ ಸತೀಶ್ ರವರು ಸಾಹಿತ್ಯವಲ್ಲದೇ ಇತರ ಹವ್ಯಾಸಗಳನ್ನು ಮೈಗೂಡಿಸಿಕೊಂಡಿದ್ದಾರೆ.
   
    
  ಸತೀಶ್ ರವರ ಫೋಟೋಗ್ರಫಿ :-ಪರಿಸರ ಪ್ರೇಮಿಯು
  ಹೌದಾಗಿರುವ ಇವರು,  ಸಾಮಾನ್ಯ ವಸ್ತು.. ಸಂಗತಿಗಳನ್ನು ತನ್ನ ದೃಷ್ಟಿಯಲ್ಲಿ ವಿಶೇಷವಾಗಿ ಕಾಣುತ್ತಾ.. ಪ್ರಕೃತಿ, ಸಸ್ಯ, ಪಕ್ಷಿ ಹೀಗೆ  ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ವಿಶೇಷವಾಗಿ ತೋರಿಸುವ ಕಲೆ ಕರಗತವಾಗಿಸಿಕೊಂಡಿದ್ದಾರೆ. ನಮ್ಮ ಸುತ್ತಮುತ್ತಲಿನ ವಸ್ತುಗಳು ಸತೀಶ್ ರವರ  ಕ್ಯಾಮರಾ ಕಣ್ ಚಳಕದಲ್ಲಿ ಕಂಡಾಗ  wow.. !ಎಂಬ ಉದ್ಗಾರ ಹೊರಡಿಸುವಂತಿರುತ್ತವೆ.
     
      ಪಕ್ಷಿಗಳನ್ನು ಪ್ರೀತಿಸುವ ಇವರು ಅವುಗಳೊಂದಿಗೆ ನಂಟು ಹೊಂದಿದ್ದು.. ಪಕ್ಷಿಗಳ ಬಗ್ಗೆ ಅಪಾರ ಜ್ಞಾನ ತುಂಬಿಕೊಂಡಿದ್ದಾರೆ.

      ಮಾತುಗಳೇ ಮತ್ತೆ ಮತ್ತೆ ಆಲಿಸುವಷ್ಟು ಹಿತವೆನ್ನಿಸುವಾಗ ಹಾಡಿದರೆ ಎಷ್ಟು ಚಂದ...!! ಹೌದು ಸತೀಶ್ ರವರ ಹಾಡುಗಾರಿಕೆ ಕೇಳಲು ಇಂಪಾಗಿರುತ್ತದೆ. ಸತೀಶ್ ರವರು ಹಾಡಿರುವ  ಕನ್ನಡ, ಮಲಯಾಳಂ, ಹಿಂದಿ ಭಾಷೆಯ ಚಲನಚಿತ್ರಗೀತೆಗಳು, ಭಾವಗೀತೆಗಳು ಅವರ ಹಾಡುಗಾರಿಕೆಯಲ್ಲಿನ ಆಸಕ್ತಿ., ತೊಡಗಿಸಿಕೊಳ್ಳುವಿಕೆಯನ್ನು ಸಾಕ್ಷಿಕರಿಸುತ್ತವೆ.

            ಚಿತ್ರಕಲೆಯನ್ನು ಹವ್ಯಾಸವಾಗಿಸಿಕೊಂಡಿರುವ  ಸತೀಶ್
ರವರು ವರ್ಣಚಿತ್ರಗಳು... ಡಿಜಿಟಲ್ ಪೇಂಟಿಂಗ್..ಹೀಗೆ ವಿವಿಧ ರೀತಿಯ ಕಲಾತ್ಮಕ ಚಿತ್ರಗಳನ್ನು ಅರಳಿಸುವಲ್ಲಿ ನಿಸ್ಸೀಮರು.

                                                                     
      ಕಾಡಿನ ಹಾದಿಯಾದರೂ ಸೈ.. !ಎನ್ನುವ ಅನ್ವೇಷಣಾ ಮನೋಭಾವದ ನಮ್ಮ ಸತೀಶ್ ರವರಿಗೆ ಗೆಳೆಯರ ಜೊತೆಗೂಡಿ  ಚಾರಣ ಹೋಗುವುದು,   ಬಲುಪ್ರೀತಿಯ   ಹವ್ಯಾಸಗಳಲ್ಲಿ ಒಂದಾಗಿದೆ.

     ಮಾಡೆಲಿಂಗ್ ಕ್ಷೇತ್ರಕ್ಕೂ ಸೈ ಎನ್ನುವ ರೀತಿಯ ಸುಂದರ, ಸದೃಢಕಾಯ ಸತೀಶ್ ರವರಿಗೆ... ಸತೀಶ್ ರವರು ಮಾತ್ರ ಸಾಟಿ.

       ಸಾಮಾಜಿಕಜಾಲತಾಣಗಳು... youtube.. ನಂತಹ ವಿಡಿಯೋ ಶೇರಿಂಗ್ ಸರ್ವಿಸ್ ಗಳಲ್ಲಿ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಶಾಲಾ ಮಕ್ಕಳ ಪ್ರತಿಭೆ.. ಕವಿತಾವಾಚನ ಹೀಗೆ ಹಲವಾರು ಉಪಯುಕ್ತ ಮಾಹಿತಿಗಳನ್ನು ಪಸರಿಸುವಲ್ಲಿ ಸಕ್ರಿಯರಾಗಿದ್ದಾರೆ.
 

   
    " ಯಾರಲ್ಲೂ ಸಲ್ಲದ ಕಲೆಗಳು.. ಸತೀಶ್ ರವರಿಗೆ ಸಲ್ಲುತ್ತವೆ.".. ಕಾರಣ ಅವುಗಳ ಜಾಡು ಹಿಡಿದು ದಕ್ಕಿಸಿಕೊಳ್ಳುವ ಶ್ರಮದ ಪ್ರಯತ್ನ /ಛಲ ಮತ್ತು ಪ್ರತಿಯೊಂದರಲ್ಲೂ ಸೃಜನಶೀಲತೆ ಹುಡುಕುವ  ನಿಪುಣತೆ ಇವರಲ್ಲಿದೆ.

    ಗಣ್ಯ ವ್ಯಕ್ತಿಗಳಿಂದಲೂ ಸೈ ಎನ್ನಿಸಿಕೊಳ್ಳುವ ಇವರು,  ಸರಳಜೀವಿ. ಸನ್ಮಾನ, ಹೊಗಳಿಕೆ, ಪ್ರಚಾರ, ಆಡಂಬರದ ಜೀವನಗಳಿಂದ ದೂರದಲ್ಲೇ ಉಳಿಯುವ ಇವರು,  ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಒಬ್ಬಂಟಿಯಾಗಿ ಹೊರಡುವ ಪರಿ... ಕವಿತೆಗಳ ಮೊರೆ ಹೋಗುವ ರೀತಿ ಇವರ ವ್ಯಕ್ತಿತ್ವಕ್ಕೆ  ಇನ್ನಷ್ಟು ಮೆರಗು ನೀಡುತ್ತವೆ. 

            ಮಾನವೀಯ ಮೌಲ್ಯಗಳು ದಿನೇ ದಿನೇ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ  ಇಂತಹ ಕವಿ., ಕವಿತೆಗಳು, ತೊಡಗಿಸಿಕೊಳ್ಳುವಿಕೆ, ವ್ಯಕ್ತಿತ್ವ ಯುವಪೀಳಿಗೆಗೆ ಮಾರ್ಗದರ್ಶಿ ಎಂದರೆ ಅತಿಶಯದ ಮಾತುಗಳಾಗುವುದಿಲ್ಲ. 

    ಇಂತಹ  ವಿಶಿಷ್ಟತೆಯ ವಿಭಿನ್ನ ಚೇತನ ನಮ್ಮೊಂದಿಗೆ ಶಿಕ್ಷಕರಾಗಿ, ನಮ್ಮ ಇಲಾಖೆಯಲ್ಲಿರುವುದೇ ಹೆಮ್ಮೆಯ ಸಂಗತಿ.           
                  2017 ರಲ್ಲಿ ಬೇಂದ್ರೆ ಗ್ರಂಥ ಬಹುಮಾನಕ್ಕೆ ಭಾಜನರಾಗಿರುವ, ಇವರಿಂದ ಸಾಹಿತ್ಯ ಲೋಕಕ್ಕೆ ಇನ್ನಷ್ಟು ಕೊಡುಗೆಗಳು ಸಲ್ಲುವಂತಾಗಲಿ,  ಹಾಗೆಯೇ ಮತ್ತಷ್ಟು ಪ್ರಶಸ್ತಿಗಳು ಇವರ ಪ್ರತಿಭೆಗೆ ಅರಸಿ ಬರಲಿ. 

      ತಮ್ಮಲ್ಲಿಯ   ಜ್ಞಾನ ಮತ್ತು ಕವಿತ್ವದ ನೆಲೆಯಿಂದ ರಾಷ್ಟ್ರಕಂಡ ಕವಿಗಳ ಸಾಲಿನಲ್ಲಿ ನಮ್ಮ ಸತೀಶ್  ಸರ್ ರವರ  ಹೆಸರು ಹೊರಹೊಮ್ಮುವಂತಾಗಲಿ ಎಂಬುದೇ ಸಾಮಾನ್ಯ ಓದುಗಳಾಗಿ ನನ್ನ ಮನತುಂಬಿದ ಹಾರೈಕೆ💐💐. 

ಮಂಗಳವಾರ, ಏಪ್ರಿಲ್ 7, 2020

ಪತಂಗ


ನನ್ನೊಳಗಿನ ಪತಂಗ
ರಂಗು.. !ರಂಗು !
ನೀಲಿ... ಕೆಂಪು ಚಿಟ್ಟೆಯಂತೆ
ಬಿಳಿ ಪಟ್ಟೆ.
ರೆಕ್ಕೆಗಳಿದ್ದರೂ..
ಸ್ವಾತಂತ್ರ್ಯ ಮರೀಚಿಕೆ.
ಪಕ.. ಪಕನೆ  ಜಿಗಿಯುತ್ತದೆ
ಕಾಲು ಮುರಿದುಕೊಳ್ಳುತ್ತದೆ
ವ್ಯಥೆಯಲ್ಲೂ ನಗುತ್ತದೆ
ಅರ್ಥೈಸುವಲ್ಲಿ ಬೀಳುತ್ತದೆ
ಪ್ರೀತಿಸ ಬಯಸುತ್ತದೆ
ಹೂವಲ್ಲಿ ಸ್ನೇಹ ಅರಸುತ್ತದೆ
ಹೇ...
ಹೂವಿಂದ ಹೂವಿಲ್ಲ ! ಇದರಲ್ಲಿ
ಹೂವಲ್ಲೇ ಪ್ರಾಣ!
ಸುತ್ತುತ್ತದೆ..ರಮಿಸುತ್ತದೆ..
ಕಾಡುತ್ತದೆ.. ಬೇಡುತ್ತದೆ..
ಇಷ್ಟಿದ್ದರೂ..
ಹೂವಿನ ಸಂಗ ಮುನಿಸು
ಬಿಟ್ಟಿತೇ.. ಹೂವನ್ನು..?
ಮತ್ತದೇ ಭಾವದ ಆಲಾಪ
ಯಾಕೀ.. ಭಾವಸಂತಾಪ.. ??
ಕೆಂಪು..ನೀಲಿ.. ಬಿಳಿ ಮಿಶ್ರಿತ
ರಂಗವಲ್ಲಿಯ ರಂಗಿನ
ಪಾತರಮಲ್ಲಿಗೆ... ??
ತಿಳಿದು.. ತಿಳಿಯುತ್ತಿಲ್ಲ
ಅದರ ಪಥದ
ಅಂತರ್ಯ   ಹಾರಾಟ..
ಹೇ..
ನಿನಗೆ ಅರಿತರೆ.. ಮರೆಯದೇ
ತಿಳಿಸು.. ನಾ ಕಾದಿರುವೆ..
ಅದಕ್ಕಾಗಿ ನಿರಂತರ.



ಸೋಮವಾರ, ಮಾರ್ಚ್ 16, 2020

ಪ್ರಾಮಾಣಿಕತೆ

                    ಮಾರುಕಟ್ಟೆಯಲ್ಲಿ ತರಕಾರಿ
                    ಹುಡುಕ ಹೊರಟ  ನನಗೆ
                    ಸಿಕ್ಕಿದ್ದು ಗುಣ..!
                    ಗುಣ ಹುಡುಕ
                    ಹೊರಟ ನನಗೆ....
                    ಅದುವೇ ಪ್ರಶ್ನೆಯೇ... ??
                    ಗೊಂದಲವೇ...
                    ಬೆಲೆಯಿಲ್ಲ ಅದಕೆ
                    ಹೆಸರಿಗೂ.. ಸ್ವಭಾವಕ್ಕೂ
                    ನಂಟಿದೆಯೇ.... ?? ?
                    ಬೆಲೆ ಎಂಬುದು ಸುಳ್ಳಂತೆ
                    ನಂಬಿಕೆ ಅದರಲ್ಲಿ ಮುಳ್ಳಂತೆ
                    ಅವರವರ ಸ್ವಭಾವದ ಅಳತೆ
                    ಪ್ರಾಮಾಣಿಕತೆ ಕತ್ತಲ್ಲಿಲ್ಲಿ
                    ಅರಾಜಕತೆ ಸುತ್ತಲ್ಲಿಲ್ಲಿ
                    ನಿರೀಕ್ಷೆ  ಬೆತ್ತಲ್ಲಲ್ಲಿ.
                    ವಂಚನೆ ಹೆಮ್ಮರವಿಲ್ಲಿ
                    ನಿಷ್ಠೆಯಲ್ಲಿ ಮೊಳಕೆ
                    ಚಿಗುರೊಡೆಯುವುದು ಸಾಧ್ಯವೇ..?
                    ಚಿವುಟುತಿಹರು ಕಪಟಧಾರಿಗಳು
                    ಬಿತ್ತಿ ಬೆಳೆಯುವರು
                    ಪಾರ್ಥೇನಿಯಂನಂತೆ
                    ಸಹಿಸುವಲ್ಲಿ ಮುಳುಗೇಳುತಿಹುದು !!
                    ನ್ಯಾಯದ ಬಿಂದಿಗೆಯು..
                    ನಿರೀಕ್ಷೆ ಗುಡಿಕಟ್ಟ ಹೊರಟವರೆಲ್ಲ
                    ಮಾನಸಿಕ ಅಸ್ವಸ್ಥರಂತೆ !!
                    ಹೇಗೆ ತಿಳಿಸುವುದು
                    ಫಲದ  ಚೀಲದೊಳಿರುವ
                     ಪುಣ್ಯವಾ.. !
                    ಹುಡುಕಿ ಸೋತಿಹೆನು ಉತ್ತರವಾ...
              
                       
                       
         
                   

ಬುಧವಾರ, ಮಾರ್ಚ್ 4, 2020

ಸ್ವಪ್ನ

                          ಪ್ರೀತಿಯೋ.. ಹಟವೋ...
                          ತಿಳಿಯುತ್ತಿಲ್ಲ.
                          ಮಗು... ತಬ್ಬಿ !
                          ಬಿಗಿದಪ್ಪಿ ಕೊಳ್ಳಬಯಸುತ್ತಿದೆ.
                          ನನ್ನಲ್ಲಿ ಮಾತ್ರ ನೀನು
                          ಚುಂಬನ, ಮುದ್ದಿಸುವಿಕೆ
                          ಆಲಿಂಗನ ನನಗೆ ಮಾತ್ರ ನಿನ್ನಲ್ಲಿ
                          ಒಮ್ಮೆಯಾದರೂ.. ಬಾಹುಗಳಲ್ಲಿ
                          ಬಂಧಿಸೆಂದು ಹಿಡಿದೆಳೆಯುತ್ತಿದೆ.
                          ಎತ್ತಲು ಹೋದರೂ... ಬಾರದು.
                          ಅಳುವಿನ ವರ್ಷಧಾರೆ
                          ಅವರೇ.. ಬೇಕ್ಕೆನ್ನುವ ಮುನಿಸು !
                          ಆದರೆ   ಮಗುವಿನಲ್ಲಿ ,
                          ಅವರದ್ದೇನೋ.. ಅಂತರ್ಯ ನಿಲುವು !
                          ತಟಸ್ಥವಾಗಿದ್ದರೂ...
                          ಬಿಡುವುದೇ... ಮಗು? ?
                          ತೋರದೆ.. ಇದ್ದರೂ..
                          ಅರಿಯದೇ.. ಅನುರಾಗವನ್ನ?
                          ಮಗುವು ತೊದಲುತ್ತ ನುಡಿಯುತ್ತಿದೆ
                          ಉತ್ತರವಾಗುವೆಯಾ... ನನ್ನಯ ಮಾತಿಗೆ?
                          ಆವರಿಸಿಹೇ ... ನಿನ್ನಯ ಮನವ ನಾನು 
                          ನಿನ್ನಲ್ಲಿರುವುದೇ..  ಅಗಲಿಕೆ ಭಾವ !!
                          ಬೀಳ್ಕೊಡುವೆಯಾ..  ನಿನ್ನಯ ಮನದಿಂದ..? 
                          ಆಲೋಚಿಸಿ.. ಚಿಂತಿಸಿ, 
                          ನುಡಿದರು.... 
                          ಕೊನೆಗೂ.. ಸೋತೆ!.
                          ನಿನ್ನಯ..  ಪ್ರೀತಿಗೆ. 
                          ಒಲಿದೆನು.. ನಿನ್ನಯ ಭಾವಕೆ !
                          ಮೂಡಿತು  ಮನದಲ್ಲಿ ನಿನ್ನಯ ರೂಪು !
                           ಕೊಡುವೆನು ಕಂದಮ್ಮ !!
                          ಬದಲಿಸಿ ನನ್ನಯ ತನವ !
                          ಎನ್ನುತ  ಮಗುವನ್ನು ಎತ್ತಿ
                          ಮುತ್ತಿಟ್ಟರು ಹಣೆಗೆ ಒಲವನ್ನು ಒತ್ತಿ. 
                          ಮಗುವು ತಬ್ಬಿತು ಕೊರಳನ್ನು ಗಟ್ಟಿ 
                          ನಿದ್ದೆಗೆ  ಜಾರಿತು, ಹೆಗಲ್ಲಲ್ಲಿ 
                          ಕೊರಳನ್ನು ಅಪ್ಪಿ. 
                          ತಟ್ಟನೆ  ಎದ್ದಿತು.. ಸ್ವಪ್ನದಿ ಮಗುವು 
                          ಸುತ್ತಲೂ.. ನೋಡಿತು.. ಅವರಿಲ್ಲ !
                          ತನ್ನಯ ಭ್ರಮೆಯ ಅರಿತು 
                          ಬಿಕ್ಕಳಿಸಿತು ಮತ್ತದೇ ನೋವಿಂದ. 
                          ಕನಸಿಗೆ ಇಲ್ಲಿ ಬೆಲೆಯಿಲ್ಲ. 
                          ನನಸಿಗೆ ಎಲ್ಲಾ ಹಾತೊರೆವವರೆಲ್ಲ. 
                          ಅರ್ಥೈಸುವುದು ಹೇಗೆ ಮಗುವಿಗೆ 
                          ಈ ತಾತ್ಪರ್ಯ ನುಡಿಯನ್ನ..   ?
                 
                         

                         


 

                       
                   

ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...